issn: 2581-8511 volume- 2 tumbe group of international … · 2019. 10. 18. · issuetumbe group of...

17
Group of International Journals A Multidisciplinary Journal for more details visit www.tumbe.org Page | 1 Volume- 2 Issue-2 May-August: 2019 ISSN: 2581-8511 Tumbe ಅಮ ನಘಟ ಸಕ ೃಅಯ ಯನ ರ ೀವ ..ಶೋಧನ ಶಾ ಾ ಚೋನ ಇಥಹಸ ಮು ಪರತತವ ಅಧಾ ಯನ ಶಭಗ ಕನ ನಡ ಶವ ಶಾ ಲಯ, ಶಾ ರಾ - 583 276 ರಸಾವ ಾ ಥಯದ ಾ ಧವ ತನ ನಧ ಆದ ಸಕ ೃಥಯನ ಹರತುದ. ಒದ ಾ ಧದ ಶಷಟ ವದ ಸಕ ೃಥಚಱಾ ಯನ ಅಱಯವಿ ಸಥ ಳೋಯ ಅಗಳ ಒದ ಕಟ ನ ಹಿ ಡತು ದ. ವಧ ಒದ ಾ ಧವನ ಸಕ ೃಥಯ ನಿ ಯದ ನೋಡವದ ಅತಾ ತ ಉಯಕುವದದ. ಒದ ಾ ಧದ ಸಕ ೃಥಇಥಹಸದ ರಚನ ಸಥ ಳೋಯ ಾ ಧಗಳದ ಆಭವಗಬಕ. ಾಮ ಪಥು , ಾ ಧದ ಗೋಳಕ ಱಸರ, ಆಕ, ಸಝಕ, , ವಾ ವಥ , ಆಚರಣಗಳ, ಧವಲಯ, ಯಥಷಲಪ , ಶಸನಗಳ, ಶೋರಗಿ ಗಳ ು ಗಿ ಗಳ, ಉಡಗ, ಡಗ, ಆಹರದಧ ಥ, ಇವಲಿ ವಗಳಗತ ಮಾ ವಗ ಾಧದಿ ರಘಢಢರವ ಜನದ ಕಲಗಳ ನವನ ಸಕ ೃಥಬದಖನಿ ಾ ಮ ಡಯತುವ. ಶಮನ ಸಕ ೃಥಗ ಹಸರಗರವ ಭರತಧದಿ ಸಕ ೃಥಯನ ವುಟ ವಗ ಪನರಚ ಸಥ ಳೋಯ ಮಟ ದಿ ಸಕ ೃಥಯನ ಹಚಿ ಳ ಬಕಗದ. ಟ ನಿ ಮಖರ ಝಲಿ , ಗಿ ತಖನ ಕಸ ಹೋಬಳಯಿ ಅಮಮ ನಘಟ ಾ ಮವ ಶಶಧ ಸಕ ೃಥಯಳ ಸಕ ೃಥಾ ಧವಗದ. ಆೋಕರ, ಜಗಥೋಕರ, ಖಸಗೋಕರದ ನ ಲಯಿ ಸಮಕೋನ ಕಲಘಟ ದಿ ಸಕ ೃಥಯ ಳಯಳಯ ಝೋಥಯನ ತನ ಒಡಲಿ ಢದ. ಇಿ ಡಬರವ ಕಲಗಳ, ಆಚರಣಗಳ, ಗಳ, ಹಬಿ ಗಳ, ಧವಲಯಗಳ, ಶೋರಗಿ ಗಳ, ು ಕಿ ಗಳ, ಕರವಗಿ ಗಳ ಸಕ ೃಥಯ ಾಥಬಕ ಆಕರಗಗವ. ಆಕ ಹಿ ಒದ ಾ ಧದ ಜನಝೋವನವ ಚಥಾ ವ ಸಕ ೃಥಅಗಳ ಮಹತವ ವನ ಕಳದಳಥುರವಗ ಾ ಧದ ಸಕ ೃಥಯ ಱಮಯನ ಗನಗದಡ ಪನರಚಡವದಱದ ಭಶಾ ದ ಜನರ ಝೋವನ ಕಾಮದಿ ಸಕ ೃಥಯನ ಱಸಬಹದ ಎಬ ಉದ ದ ೋಾುತ ಅಮಮ ನಘಟ ಾಮದಿ ಸಕ ೃಥ ರಘಢಢದ ಎಬದನ ಶಿ ೋವ ಾ ಯತನ ಡಗದ. ಾುತ ಾ ಧದ ಸಕ ೃಥಯನ ಅಱಯ ಷ ೋತಾ ಕಯಗಳ ಳ ವದರ ಯಲಕ ಮು ಱಯ ವಾ ಖು ಗಳಶಯ ಗಾ ಸಕ ೃಥ

Upload: others

Post on 13-Dec-2020

1 views

Category:

Documents


0 download

TRANSCRIPT

Page 1: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

A Multidisciplinary Journal

for more details visit www.tumbe.org Page | 1

Volume- 2 Issue-2 May-August: 2019

ISSN: 2581-8511

Tumbe

ಅಮ್ಮ ನಘಟ್ಟ ಸಾಂಸ್ಕ ೃತಿಕ ಅಧ್ಯ ಯನ

ಶ್ರ ೀನಿವಾಸ್ ಎ.ಜಿ

ಪಿಎಚ್.ಡಿ ಸಂಶೋಧನಾ ವಿದ್ಯಾ ರ್ಥಿ

ಪ್ರಾ ಚೋನ ಇತಿಹಾಸ ಮತ್ತು ಪುರಾತತವ

ಅಧಾ ಯನ ವಿಭಾಗ

ಕನನ ಡ ವಿಶ್ವ ವಿದ್ಯಾ ಲಯ, ಹಂಪಿ

ವಿದ್ಯಾ ರಣ್ಾ - 583 276

ಪ್ರ ಸಾ ವನೆ

ಪ್ಾ ತಿಯೊಂದು ಪ್ಾ ದೇಶ್ವು ತನನ ದೇ ಆದ ಸಂಸಕ ೃತಿಯನ್ನನ ಹೊಂದಿರುತು ದೆ. ಒೊಂದು ಪ್ಾ ದೇಶ್ದ

ವಿಶಿಷ್ಟ ವಾದ ಸೊಂಸಕ ೃತಿಕ ಚರಿತ್ರಾ ಯನ್ನನ ಅರಿಯುವಲಿ್ಲ ಸಥ ಳೋಯ ಅೊಂಶ್ಗಳು ಒೊಂದು ನಿರ್ಧಿಷ್ಟ ಚೌಕಟ್ಟ ನ್ನನ

ಸೃಷಿ್ಠ ಸಿಕೊಡುತು ದೆ. ಯಾವುದೇ ಒೊಂದು ಪ್ಾ ದೇಶ್ವನ್ನನ ಸಂಸಕ ೃತಿಯ ದೃಷಿ್ಠಯೊಂದ ನೋಡುವುದು ಅತಾ ೊಂತ

ಉಪ್ಯುಕು ವಾದುದು. ಒೊಂದು ಪ್ಾ ದೇಶ್ದ ಸೊಂಸಕ ೃತಿಕ ಇತಿಹಾಸದ ರಚನೆ ಸಥ ಳೋಯ ಪ್ಾ ದೇಶ್ಗಳೊಂದ

ಆರಂಭವಾಗಬೇಕು. ಗ್ರಾ ಮ ನಿಷ್ಪ ತಿು , ಆ ಪ್ಾ ದೇಶ್ದ ಭೌಗೋಳಕ ಪ್ರಿಸರ, ಆರ್ಥಿಕ, ಸಮಾಜಿಕ, ಧಾರ್ಮಿಕ,

ವಾ ವಸ್ಥಥ , ಆಚರಣೆಗಳು, ದೇವಾಲಯ, ಮೂತಿಿಶಿಲಪ , ಶಾಸನಗಳು, ವಿೋರಗಲಿ್ಲ ಗಳು ಮಾಸಿು ಗಲಿ್ಲ ಗಳು, ಉಡುಗೆ,

ತೊಡುಗೆ, ಆಹಾರಪ್ದಧ ತಿ, ಇವೆಲಿವುಗಳಗೊಂತ ಮುಖ್ಾ ವಾಗ ಆ ಪ್ಾ ದೇಶ್ದಲಿ್ಲ ಮೈಗೂಡಿಕೊೊಂಡಿರುವ ಜಾನಪ್ದ

ಕಲೆಗಳು ಮಾನವನ ಸೊಂಸಕ ೃತಿಕ ಬದುಕಿನಲಿ್ಲ ಪ್ರಾ ಮುಖ್ಾ ತ್ರ ಪ್ಡೆಯುತು ವೆ.

ವಿಭಿನನ ಸಂಸಕ ೃತಿಗೆ ಹೆಸರಾಗರುವ ಭಾರತದೇಶ್ದಲಿ್ಲ ಸಂಸಕ ೃತಿಯನ್ನನ ವಸ್ತು ನಿಷ್ಟ ವಾಗ ಪುನರಚಸಿ

ಸಥ ಳೋಯ ಮಟ್ಟ ದಲಿ್ಲ ಸಂಸಕ ೃತಿಯನ್ನನ ಹೆಚಿ ಸಿಕೊಳ್ಳ ಬೇಕಾಗದೆ. ಈ ನಿಟ್ಟಟ ನಲಿ್ಲ ತ್ತಮಕೂರು ಜಿಲಿೆ , ಗುಬಿ್ಬ

ತಾಲೂಕಿನ ಕಸಬಾ ಹೋಬಳಯಲಿ್ಲ ಅಮಮ ನಘಟ್ಟ ಗ್ರಾ ಮವು ವಿವಿಧ ಸಂಸಕ ೃತಿಯುಳ್ಳ ಸೊಂಸಕ ೃತಿಕ

ಪ್ಾ ದೇಶ್ವಾಗದೆ. ಆಧುನಿೋಕರಣ್, ಜಾಗತಿೋಕರಣ್, ಖಾಸಗೋಕರಣ್ದ ಹಿನೆನ ಲೆಯಲಿೂ ಸಮಕಾಲ್ಲೋನ ಕಾಲಘಟ್ಟ ದಲಿ್ಲ

ಸಂಸಕ ೃತಿಯ ಪ್ಳೆಯುಳಕೆಯುಳ್ಳ ಜಿೋವಂತಿಕೆಯನ್ನನ ತನನ ಒಡಲಲಿ್ಲ ತ್ತೊಂಬ್ಬಕೊೊಂಡಿದೆ. ಇಲಿ್ಲ ಕಂಡುಬರುವ

ಕಲೆಗಳು, ಆಚರಣೆಗಳು, ನಂಬ್ಬಕೆಗಳು, ಹಬಿ ಗಳು, ದೇವಾಲಯಗಳು, ವಿೋರಗಲಿ್ಲ ಗಳು, ಮಾಸಿು ಕಲಿ್ಲ ಗಳು,

ಕರವುಗಲಿ್ಲ ಗಳು ಸಂಸಕ ೃತಿಯ ಪ್ಾ ತಿಬ್ಬೊಂಬಕೆಕ ಆಕಾರಗಳಾಗವೆ.

ಆಧುನಿಕತ್ರ ಹೆಚಿ್ಚದಂತ್ರ ಒೊಂದು ಪ್ಾ ದೇಶ್ದ ಜನಜಿೋವನವನ್ನನ ಚತಿಾ ಸ್ತವ ಸೊಂಸಕ ೃತಿಕ ಅೊಂಶ್ಗಳು

ಮಹತವ ವನ್ನನ ಕಳೆದುಕೊಳುಳ ತಿು ರುವಾಗ ಆ ಪ್ಾ ದೇಶ್ದ ಸಂಸಕ ೃತಿಯ ಹಿರಿಮೆಯನ್ನನ ಗಣ್ನೆಗೆ ತ್ರಗೆದುಕೊೊಂಡು

ಪುನರಚನೆ ಮಾಡುವುದರಿೊಂದ ಭವಿಷ್ಾ ದ ಜನರ ಜಿೋವನ ಕಾ ಮದಲಿ್ಲ ಸಂಸಕ ೃತಿಯನ್ನನ ರೂಪಿಸಬಹುದು ಎೊಂಬ

ಉದೆದ ೋಶ್ದಿೊಂದ ಪ್ಾ ಸ್ತು ತ ಅಮಮ ನಘಟ್ಟ ಗ್ರಾ ಮದಲಿ್ಲ ಸಂಸಕ ೃತಿ ಹೇಗೆ ಮೈಗೂಡಿಕೊೊಂಡಿದೆ ಎೊಂಬುದನ್ನನ

ವಿಶಿ್ೋಷ್ಠಸ್ತವ ಪ್ಾ ಯತನ ಮಾಡಲಾಗದೆ. ಪ್ಾ ಸ್ತು ತ ಪ್ಾ ದೇಶ್ದ ಸಂಸಕ ೃತಿಯನ್ನನ ಅರಿಯಲ್ಲ ಕೆಷ ೋತಾ

ಕಾಯಿಕೈಗಳುಳ ವುದರ ಮೂಲಕ ಮತ್ತು ಹಿರಿಯ ವಾ ಕಿು ಗಳೊಂದಿಗೆ ಚಚಿಸಿ ವಿಷ್ಯ ಸಂಗಾ ಹಿಸಿ ಸೊಂಸಕ ೃತಿಕ

Page 2: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 2

Volume- 2 Issue-2 May-August : 2019

ISSN: 2581-8511

ಆಕರಗಳ್ನ್ನನ ಸಂಗಾ ಹಿಸಿ ವಿಷ್ಯಾನ್ನಸರ ವಿಶಿ್ೋಷ್ಠಸಿ ಸಂಯೋಜಿಸ್ತವ ಮೂಲಕ ಈ ಗ್ರಾ ಮದ ಸಂಸಕ ೃತಿಯನ್ನನ

ಕಟ್ಟಟ ಕೊಡಲಾಗದೆ.

ಗ್ರರ ಮ್ಪ್ರಿಚಯ

ಕನಾಿಟ್ಕದ ರಾಜಧಾನಿಯಾದ ಬೊಂಗಳೂರಿಗೆ ಹಾದು ಹೋಗುವ ರಾಷ್ಠಟ ರೋಯ ಹೆದ್ಯದ ರಿ 206ರಲಿ್ಲ

ರಾಜಧಾನಿಗೆ ಹೆಬಿಾ ಗಲ್ಲನಂತಿರುವ ಕಲಪ ತರುನಾಡು, ಶೈಕ್ಷಣಿಕ ತವರೂರಾದ ತ್ತಮಕೂರು ಜಿಲಿೆಯಲಿ್ಲ ಗುಬಿ್ಬ

ತಾಲೂಕು ಒೊಂದ್ಯಗದೆ. 1986ರ ನಂತರ ಗುಬಿ್ಬ ತಾಲೂಕು ಕೊಂದಾ ವಾಗದುದ ಕಸಬಾ, ನಿಟ್ಟಟ ರು, ಕಡಬ,

ಸಿ.ಎಸ್.ಪುರ, ಚೇಳೂರು, ಹಾಗಲವಾಡಿ ಎೊಂಬ ಆರು ಹೋಬಳಗಳ್ನ್ನನ ಹೊಂದಿದುದ 300ಕೂಕ ಅರ್ಧಕ

ಗ್ರಾ ಮಗಳ್ನ್ನನ ಒಳ್ಗೊಂಡಿದೆ. ಕಸಬಾ ಹೋಬಳಯಲಿ್ಲ ಕಂಡುಬರುವ ಗ್ರಾ ಮಗಳ್ಲಿ್ಲ ಅಮಮ ನಘಟ್ಟ ಗ್ರಾ ಮವು

ಒೊಂದ್ಯಗದೆ. ಇದು ತನನ ದೇ ಆದಂತಹ ಸಂಸಕ ೃತಿಯನ್ನನ ಮೈಗೂಡಿಸಿಕೊೊಂಡಿದೆ. ಗುಬಿ್ಬಯೊಂದ ತ್ರೊಂಕಣ್ ಭಾಗಕೆಕ

05ಕಿ.ರ್ಮೋ ದೂರದಲಿ್ಲ ಅಮಮ ನಘಟ್ಟ ಗ್ರಾ ಮವಿದೆ.

ಅಮಮ ನಘಟ್ಟ ಎೊಂಬ ಹೆಸರು ಬರಲ್ಲ ಕಾರಣ್ವೇನ್ನ ಎೊಂಬ ವಿಷ್ಯವನ್ನನ ಹಿರಿಯರೊಡನೆ ಚಚಿಸಿದ್ಯಗ

ವಿೋರಭದಾ ದೇವಾಲಯ ನಿಮಾಿಣ್ ಕಾಯಿದಲಿ್ಲ ತೊಡಗಕೊೊಂಡಾಗ ತಳ್ಪ್ರಯವನ್ನನ ಹಾಕಲ್ಲ

ಭೂರ್ಮಯನ್ನನ ಅಗೆಯುವಾಗ ಮುೊಂಡವಿಲಿದ ಒೊಂದು ಸಿು ರೋ ವಿಗಾ ಹ ದೊರಕಿದುದ ಅದರ ಮುಖ್ದಲಿ್ಲ

ಕೂದಲ್ಲಗಳು (ರೊೋಮ) ಕಂಡುಬಂದಿದದ ರಿೊಂದ ಆ ಗ್ರಾ ಮಕೆಕ ಅಮಮ ನಗಡಡ ಎೊಂದು ಕರೆಯುತಿು ದದ ರು.

ಕಾಲಾನಂತರದಲಿ್ಲ ಅಮಮ ನಘಟ್ಟ ವಾಗದೆ ಎೊಂದು ಹೇಳುತಾು ರೆ.

ಪ್ರಾ ಕಾು ನಾದ್ಯರದ ಹಿನೆನ ಲೆಯಲಿ್ಲ ಗಮನಿಸಿದ್ಯಗ ಅಮಮ ಎೊಂದರೆ ಗ್ರಾ ಮದ ಅರ್ಧದೇವತ್ರ ಘಟ್ಟ ಎೊಂದರೆ

ನಿೋರಿರುವ ತಾಣ್ ಅಥವಾ ಎತು ರದ ಪ್ಾ ದೇಶ್ ಎೊಂದಥಿವನ್ನನ ಕೊಡುತು ದೆ. ಇದನ್ನನ ಗಮನಿಸಿದ್ಯಗ ಈ ಗ್ರಾ ಮದಲಿ್ಲ

ಸಿು ರೋ ದೇವತ್ರಯಾದ ಮಾರಮಮ (ಕೆೊಂಪ್ಮಮ ) ಇದುದ ಊರ ಮುೊಂಭಾಗದಲಿ್ಲ ಕೆರೆ ಇರುವುದರಿೊಂದ ಅಮಮ ನಘಟ್ಟ

ಎೊಂದ್ಯಗದೆ.

ಮೇಲ್ಲನ ಎರಡು ಅೊಂಶ್ಗಳ್ ಜೊತ್ರಗೆ ಮತೊು ೊಂದು ಮಹತವ ದ ಅೊಂಶ್ವಿದೆ. ಅಮಮ ನಘಟ್ಟ ಎೊಂಬ ಹೆಸರಿರುವ

ಒೊಂದು ತಾಮಾ ಶಾಸನ ಲಭಾ ವಾಗದೆ. ಕನಾಿಟ್ಕವನ್ನನ ಆಳವ ಕೆ ಮಾಡಿದ ಹೆಸರಾೊಂತ ಮನೆತನವಾದ ವಿಜಯನಗರ

ಸಮಾಾ ಜಾ ದ ಆಳವ ಕೆಯ ಕಾಲದಲಿ್ಲ ಗುಬಿ್ಬ ಹಸಹಳಳ ಒೊಂದು ಪ್ರಳೇಯಪ್ಟ್ಟಟ ಗತ್ತು . ಈ ಪ್ರಳೇಯಪ್ಟ್ಟಟ ನ

ಹಿರೇಮಠದ ವಂಶ್ಸಥ ರಾದ ಲ್ಲೊಂ|| ಚನನ ಬಸವ ಆರಾಧಾ ರು ಹನ್ನನ ಡಿಕೆಯಲಿ್ಲ ವಾಸವಾಗದುದ ಅವರ

ಮನೆಯಲಿ್ಲ ದೊರಕಿರುವ ಈ ತಾಮಾ ಶಾಸನದಲಿ್ಲ ಅಮಮ ನಘಟ್ಟ ದ ಉಲಿೆೋಖ್ವಿದೆ. ಈ ಶಾಸನ 101/2 ಅೊಂಗುಲ

ಉದದ 81/2 ಅೊಂಗುಲ ಅಗಲ 800 ಗ್ರಾ ೊಂ ತೂಕದ 03 ರ್ಮಲ್ಲರ್ಮೋಟ್ರ್ ದಪ್ಪ ದ ತಾಮಾ ಶಾಸನದ ಮೇಲೆ ಯಾವ

ಮುದೆಾಯೂ ಇಲಿ ಇದರ ಹಿೊಂಬದಿಯಲಿ್ಲ ಸೂಯಿ, ಚಂದಾ ಮತ್ತು ಲ್ಲೊಂಗು ಮುದೆಾ ಯ ಚಹೆನ ಇದೆ. ಈ

ಶಾಸನದಲಿ್ಲ ಅಕ್ಷರ ದೊೋಷ್ಗಳು ಕಂಡುಬರುತು ವೆ. ಈ ಶಾಸನದಲಿ್ಲ ಬ್ಬದರೆ, ಗೌರಿೋಪುರ, ಅಮಮ ನಘಟ್ಟ ,

ಲಕೆಕ ೋನಹಳಳ ಗ್ರಾ ಮಗಳ್ ಹೆಸರುಗಳು ಕಂಡುಬರುತು ವೆ. ಅಮಮ ನಘಟ್ಟ ಗ್ರಾ ಮದ ಬಗೆೆ ಲ್ಲಖಿತವಾಗ ಸಿಕಿಕ ರುವ

ಪ್ಾ ಥಮ ದ್ಯಖ್ಲೆಯಾಗದೆ.

ಬ್ಬದಿರೆ ಸಿೋಮೆ, ಮಧಾ ದ ಗೋಪುಪುರ ಇೊಂದು ಗೌರಿಪುರವಾಗದೆ. ತ್ರೊಂಕಲ್ಲ ಅೊಂಮನಕಟ್ಟತ್ತ,

ಅಮಮ ನಘಟ್ಟ ವಾಗದೆ. ಪ್ಡುವಲ್ಲ ಲಖೆನಹಳಳ , ಲಕೆಕ ೋನಹಳಳ ಎೊಂದ್ಯಗದೆ. ಹಿೋಗೆ ಈ ಶಾಸನದಲಿ್ಲ ಕಂಡುಬರುವ

ಎಲಿಾ ಹಳಳ ಗಳ್ನ್ನನ ಈಗಲೂ ಗುರುತಿಸಬಹುದ್ಯಗದೆ. ಈ ಶಾಸನದ ಅೊಂತಾ ದಲಿ್ಲ ವಿಜಯನಗರದ ಅರಸರ

ಒಪ್ಪ ವಾದ ಶಿಾ ೋ ವಿರೂಪ್ರಕ್ಷ ಎೊಂಬುದನ್ನನ ಬರೆದಿದೆ. ಈ ಶಾಸನಾಧಾರದ ಹಿನೆನ ಲೆಯಲಿ್ಲ ಗಮನಿಸಿದ್ಯಗ 14-15ನೇ

ಶ್ತಮಾನದಲಿ್ಲ ಈ ಗ್ರಾ ಮ ಉಗಮಗೊಂಡಿದೆಯೊಂದು ತಿಳದುಬರುತು ದೆ.

Page 3: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 3

Volume- 2 Issue-2 May-August : 2019

ISSN: 2581-8511

ಭೌಗೀಳಿಕ ಪ್ರಿಸ್ರ ಮ್ತ್ತಾ ವಿಸ್ಾ ೀರ್ಣ

ಪ್ಾ ತಿಯೊಂದು ಪ್ಾ ದೇಶ್ದ ಭೌಗೋಳಕ ಪ್ರಿಸರದಲಿ್ಲ ಸಂಸಕ ೃತಿಯು ಕೂಡ ತನನ ಹುಟ್ಟಟ ಮತ್ತು

ಅೊಂತಾ ವನ್ನನ ಕಂಡುಕೊಳುಳ ತು ವೆ. ಒೊಂದು ಪ್ಾ ದೇಶ್ದ ಸಂಸಕ ೃತಿಯ ವಿಕಾಸದಲಿ್ಲ ಭೌಗೋಳಕ ಅೊಂಶ್ಗಳು ತ್ತೊಂಬಾ

ಸಹಕಾರಿಯಾಗವೆ. ಒೊಂದು ನಿರ್ಧಿಷ್ಟ ಪ್ಾ ದೇಶ್ದಲಿ್ಲ ಮಾನವ ಸಂಸಕ ೃತಿ ಬಳೆಯಬೇಕಾದರೆ ಅಲಿ್ಲನ ಹವಾಗುಣ್.

ಮಣಿಿ ನ ರಚನೆ ಮತ್ತು ಫಲವತು ತ್ರ ಸಂಪ್ತ್ತು ನದಿ ಬಯಲ್ಲನಂತಹ ಅೊಂಶ್ಗಳು ಕಾರಣ್ವಾಗವೆ. ಉತು ಮ

ಭೌಗೋಳಕ ಅೊಂಶ್ಗಳ್ನ್ನನ ಒಳ್ಗೊಂಡಿರುವ ಈ ಪ್ಾ ದೇಶ್ದಲಿ್ಲ . ಇಲಿ್ಲನ ಜನ ಸಂಸಕ ೃತಿಯನ್ನನ ತಿಳಯಲ್ಲ

ಸಹಕಾರಿಯಾಗ ನಿಲಿ್ಲತು ವೆ. ಸಂಸಕ ೃತಿಯ ದೃಷಿ್ಠಕೊೋನದಲಿ್ಲ ತನನ ದೇ ಆದಂತಹ ವಿಶಿಷ್ಟ ಸಥ ನ ಪ್ಡೆದಿರುವ

ಗುಬಿ್ಬ ತಾಲೂಕಿನಲಿ್ಲ ಅಮಮ ನಘಟ್ಟ ತನನ ದೇ ಆದಂತಹ ಸೊಂಸಕ ೃತಿಕ ವೈಶಿಷ್ಟ ಾ ತ್ರಯನ್ನನ ಮೈಗೂಡಿಸಿಕೊೊಂಡಿದೆ.

ಅಮಮ ನಘಟ್ಟ ಗ್ರಾ ಮವು ಕೊೋಡಿಹಟ್ಟಟ , ಹಸಹಟ್ಟಟ , ಮಜರೆ ಗ್ರಾ ಮಗಳು ಸೇರಿಕೊೊಂಡು ಇದೇ ಗ್ರಾ ಮದ

ಭೋವಿ ಕಾಲೋನಿ, ತೊೋಟ್ದ ಬೈಲ್ಲ, ಸಿದದ ನಂಜಪ್ಪ ನ ತೊೋಟ್ ಒಳ್ಗೊಂಡ ಕಂದ್ಯಯ ಗ್ರಾ ಮವಾಗದುದ , 880,

631818 ಹೆಕೆಟ ೋಸ್ಿ ಭೌಗೋಳಕ ವಿಸಿು ೋಣ್ಿವನ್ನನ ಹೊಂದಿದೆ. 930.30 ಎಕರೆ ಖುಷ್ಠಕ ಭೂರ್ಮ. 96.12 ಎಕರೆ ತರಿ,

270.09ಎಕರೆ ಬಾಗ್ರಯುು ಪ್ಾ ದೇಶ್ವಿದೆ. 86.16ಎಕರೆ ಗೋಮಾಳ್ವನ್ನನ ಹೊಂದಿದೆ. 13-19ರಿೊಂದ 140 ಉತು ರ

ಅಕಾಷ ೊಂಶ್ ಮತ್ತು 76-51ರಿೊಂದ 420 ಪೂವಿ ರೇಖಾೊಂಶ್ಗಳ್ ನಡುವೆ ಕಂಡುಬರುತು ದೆ.

ಗ್ರಾ ಮದ ಭೂ ಮೇಲೆಮ ೈ ಬಯಲ್ಲ ಪ್ಾ ದೇಶ್ದಿೊಂದ ಕೂಡಿದುದ , ಸಮತಟ್ಟಟ ದ ಮರಳು ರ್ಮಶಿಾ ತ ಕೆೊಂಪು

ಮಣಿಿ ನ, ಕಪುಪ ಮಣಿಿ ನ ಕೃಷ್ಠಗೆ ಯೋಗಾ ವಾದ ಘಲವತಾು ದ ಭೂರ್ಮಯನ್ನನ ಹೊಂದಿದೆ. ಈ ಪ್ಾ ದೇಶ್ದಲಿ್ಲ ಹೆಚಿ್ಚ

ಮರಳು ರ್ಮಶಿಾ ತ ಕೆೊಂಪು ಮಣಿ್ಣ ಕಂಡುಬರುವುದರಿೊಂದ ಕಡಿಮೆ ಮಳೆ ಬ್ಬದದ ರೂ ವಿವಿಧ ಬಳೆ ಬಳೆಯಲ್ಲ

ಅನ್ನಕೂಲಕರವಾಗದೆ. ಯಾವುದೇ ಬಟ್ಟ ಗುಡಡ ಗಳು ಕಂಡುಬರುವುದಿಲಿ .

ಹವಾಮಾನ

ಗ್ರಾ ಮ ಪ್ರಿಸರದ ವಾಯುಗುಣ್ ತಾಲೂಕು ಕೊಂದಾ ಕೆಕ ಹೋಗೆಕೊೊಂಡಂತ್ರಯೇ ಇದೆ. ಇಲಿ್ಲಯ

ವಾಯುಗುಣ್ ಸಮಶಿೋತೊೋಷ್ಿ ಮಾದರಿಯಾಗದುದ ಮಳೆಗ್ರಲ, ಬೇಸಿಗೆ ಕಾಲ ಚಳಗ್ರಲ ಎೊಂದು ಮೂರು

ಋತ್ತಗಳು ಕಂಡುಬರುತು ವೆ. ಇತಿು ೋಚೆಗೆ ಹವಾಮಾನ ವೈಪ್ರಿೋತಾ ದಿೊಂದ್ಯಗ ಸರಿಯಾದ ಸಮಯಕೆಕ ಮಳೆ

ಬ್ಬೋಳುತಿು ಲಿ . ವಾಷ್ಠಿಕ ಸರಾಸರಿ 529 ರ್ಮ.ರ್ಮೋಟ್ರ್ ಮಳೆಯಾಗುತಿು ದುದ ಅದರಲಿೂ ಕಿಷ ೋಣ್ತ್ರವುೊಂಟ್ಟಗದೆ. ಹುಣ್ಸ್ಥ,

ಮಾವು, ಹಲಸ್ತ, ಹೊಂಗೆ, ಬೇವು, ಜಾಲ್ಲ, ತೇಗ ಮುೊಂತಾದ ವಿವಿಧ ಜಾತಿಯ ಸಸಾ ರಾಶಿಗಳು ಮಳೆಯನೆನ ೋ

ಅವಲಂಬ್ಬಸಿವೆ. ಜೂನ್, ಜುಲೈ ತಿೊಂಗಳನಿೊಂದ ಸಸಾ ಗಳು ನಿಧಾನವಾಗ ಹಚಿ ಹಸಿರನ್ನನ ಪ್ಡೆಯಲ್ಲ ಸಜಾಾ ಗ

ಆಗಸ್ಟ ಮಧಾ ಭಾಗದ ವೇಳೆಗೆ ಅಚಿ ಹಸಿರನ್ನನ ಹುಟ್ಟಟ ಕಂಗಳಸ್ತತು ವೆ. ಶೇ 300ಛಿ ನಿೊಂದ 400ಛಿ ವರೆಗೆ ಅರ್ಧಕ

ತಾಪ್ಮಾನವಿದದ ರೆ ಚಳಗ್ರಲದಲಿ್ಲ 110ಛಿ ನಿೊಂದ 120ಛಿ ವರೆಗೆ ಕನಿಷ್ಟ ತಾಪ್ಮಾನವಿರುತು ದೆ.

ಅರರ್ಯ ಸಂಪ್ತ್ತಾ ಮ್ತ್ತಾ ಪ್ರರ ಣಿ ಪ್ಕಿ್ಷಗಳು

ಮಾನವ ಮತ್ತು ಅರಣ್ಾ ದ ನಡುವೆ ನಿಕಟ್ವಾದ ಸಂಬಂಧವಿದೆ. ಶುದದ ವಾದ ಗ್ರಳ, ನಿೋರು, ಮಣಿಿ ನ

ಘಲವತು ತ್ರ ಭೂರ್ಮಯ ತೇವಾೊಂಶ್ವನ್ನನ ಅರಣ್ಾ ಹಿಡಿದಿಡುತು ದೆ. ಅಮಮ ನಘಟ್ಟ ದ ಪ್ರಾ ದೇಶಿಕ ವಾಾ ಪಿು ಯಲಿ್ಲ

187.27273 ಹೆಕೆಟ ೋಸ್ಿಗಳ್ಷ್ಟಟ ಸಮಾಜಿಕ ಅರಣ್ಾ ವನ್ನನ ಹೊಂದಿದೆ. ಗ್ರಾ ಮದ ದಕಿಷ ಣ್ದಿೊಂದ ಪ್ಶಿಿ ಮದವರೆಗೂ

ಹರಡಿಕೊೊಂಡಿದೆ. ಯಾವುದೇ ಬಲೆ ಬಾಳುವ ಮರಗಳು ಮತ್ತು ದಟ್ಟ ವಾದ ಅರಣ್ಾ ಪ್ಾ ದೇಶ್ ಕಂಡುಬರುವುದಿಲಿ .

ಅತಾ ರ್ಧಕ ಮಳೆ ಬ್ಬೋಳ್ದೆ ಇರುವುದರಿೊಂದ ಎತು ರವಾದ ಮತ್ತು ದಪ್ಪ ವಾದ ಮರಗಳು ಕಂಡುಬರುವುದಿಲಿ . ನಿೋಲಗರಿ,

ತಂಗಡಿ, ತ್ತಗೆಲ್ಲ, ಕಗೆಲ, ಬ್ಬದಿರು, ಹೊಂಗೆ, ಬೇವು ಮುೊಂತಾದ ಜಾತಿಯ ಮರಗಳು ಕಂಡುಬರುತು ವೆ. ಗ್ರಾ ಮದ

ದಕಿಷ ಣ್ ಭಾಗದಲಿ್ಲದದ ಅರಣ್ಾ ವನ್ನನ ಕಡಿದು ಇತಿು ೋಚೆಗೆ ಅರಣ್ಾ ಇಲಾಖೆ ಹಸದ್ಯಗ ತೇಗ, ಸವೆಿ, ಅಕಿಿಲಸ್

Page 4: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 4

Volume- 2 Issue-2 May-August : 2019

ISSN: 2581-8511

ನಂತಹ ಬಲೆಬಾಳುವ ಗಡಗಳ್ನ್ನನ ಬಳೆಸ್ತತಿು ದ್ಯದ ರೆ. ಪ್ಶಿಿ ಮ ದಿಕಿಕ ನಲಿ್ಲ ಸೌದೆಯನ್ನನ ಒದಗಸಬಲಿೊಂತಹ

ಮರಗಳೇ ಹೆಚಿ್ಚ ಗವೆ. ಬಡವಗಿದವರು ವಷ್ಿವಿಡಿೋ ಉರುವಲ್ಲಗೆ ಅರಣ್ಾ ದ ಮರಗಳ್ನೆನ ೋ ಕಡಿದು

ಬಳ್ಸ್ತತಿು ದದ ರು. ಆದರೆ ಇತಿು ೋಚೆಗೆ ಅರಣ್ಾ ಇಲಾಖೆಯವರು ರಕ್ಷಣೆಯ ದೃಷಿ್ಠಯೊಂದ ಕಟ್ಟಟ ನಿಟ್ಟಟ ನ ಕಾ ಮ

ಕೈಗೊಂಡಿದ್ಯದ ರೆ. ಇೊಂತಹ ಅರಣ್ಾ ಪ್ಾ ದೇಶ್ದಲಿ್ಲ ನರಿ, ಮುೊಂಗುಸಿ, ತೊೋಳ್, ಕಾಡುಹಂದಿ, ಮುಳ್ಳ ೊಂದಿ ಮೊಲ,

ಗೂಬ, ಕೊೋತಿ, ಉಡ ವಿವಿಧ ಜಾತಿಯ ಹಾವುಗಳು ಕಾಡು ಪ್ರಾ ಣಿಗಳಾಗವೆ. ಆಗ್ರಗ ಚರತ್ರಗಳು ವಲಸ್ಥ ಬರುತು ವೆ.

ಕಾಡುಪ್ಕಿಷ ಗಳಾದ ಹದುದ , ಕೊೋಗಲೆ, ನವಿಲ್ಲ, ಗೌಜಲಕಿಕ , ಕಾಡುಕೊೋಳ, ಗಳ, ಮರಕುಟ್ಕ, ಗುಬಿ ಚಿ

ಪ್ರರಿವಾಳ್ದಂತಹ ಕಾಡು ಪ್ಕಿಷ ಗಳು ಕಂಡುಬರುತು ವೆ.

ಗ್ರಾ ಮದಲಿ್ಲ 2150 ಸಕುಪ್ರಾ ಣಿಗಳವೆ. ದನಗಳು, ಹಸ್ತಗಳು, ಕುರಿಗಳು, ಮೇಕೆಗಳು, ಟ್ಗರು, ಎಮೆಮ ,

ಕೊೋಣ್ಗಳವೆ, ಸ್ತಮಾರು 794 ಸಕುಪ್ಕಿಷ ಗಳವೆ. ನಾಟ್ಟಕೊೋಳ, ಗರಿರಾಜ ಕೊೋಳ, ಕಲಿ್ಲಕೊೋಳ, ಟ್ಕಿಿಕೊೋಳ,

ನವಿಲ್ಲನಂತಹ ಸಕುಪ್ಕಿಷ ಗಳವೆ. ಕೃಷ್ಠಯ ಜೊತ್ರಯಲಿೆೋ ಕೆಲವರು ಹೈನ್ನಗ್ರರಿಕೆ ಅವಲಂಬ್ಬಸಿರುವುದರಿೊಂದ

ರೇಡಾಯನ್, ಜೆಸಿಿ ಹೆಚ್.ಎಫ್ ತಳಗಳ್ ಸಿೋಮೆಹಸ್ತಗಳ್ನ್ನನ ಸಕಿದ್ಯದ ರೆ.

ಜಲಸಂಪ್ತ್ತಾ

ಈ ಗ್ರಾ ಮದಲಿ್ಲ ಕೆರೆಗಳು, ಬಾವಿಗಳು, ಕೊಳ್ವೆ ಬಾವಿಗಳು ನಿೋರಿನ ಸಂಪ್ನ್ಮಮ ಲಗಳಾಗವೆ. ಅಮಮ ನಘಟ್ಟ

ಗ್ರಾ ಮದಲಿ್ಲ ಎರಡು ಕೆರೆಗಳು ಕಂಡುಬರುತು ವೆ. ಸವೆಿ ನಂ.151ರಲಿ್ಲ 77.38 ಎಕರೆ ವಿಸಿು ೋಣ್ಿದ ದೊಡಡ ಕೆರೆಯದೆ.

ಸವೆಿ ನಂ.74ರಲಿ್ಲ 30.11 ಎಕರೆ ವಿಸಿು ೋಣ್ಿವುಳ್ಳ ಊರ ಮುೊಂದಿನ ಕೆರೆಯದೆ. ಈ ಗ್ರಾ ಮವು ನಿೋರಾವರಿಗೆ ಈ ಎರಡು

ಕೆರೆಯನ್ನನ ಆಶ್ಾ ಯಸಿದೆ. ಈ ಎರಡೂ ಕೆರೆಗಳಗೆ ಮಳೆಯ ನಿೋರಿನ ಜೊತ್ರಗೆ ಆಗಸ್ಟ ಕೊನೆಯೊಂದ ಅಕೊಟ ೋಬರ್

ನವಂಬರ್ ತಿೊಂಗಳ್ವರೆಗೆ ಮಾನವ ನಿರ್ಮಿತ ಕಾಲ್ಲವೆಗಳ್ ಮೂಲಕ ಹೇಮಾವತಿ ನದಿ ನಿೋರನ್ನನ ಅರಿಸ್ತತಾು ರೆ.

ಇದರಿೊಂದ ಅೊಂತಜಿಲ ಸ್ತಧಾರಣೆಗೆ ಅನ್ನಕೂಲವಾಗದೆ. ಇತಿು ೋಚೆಗೆ ಬ್ಬೋಳುವ ಮಳೆಯ ಪ್ಾ ಮಾಣ್ದಲಿ್ಲ ಕುಸಿತ

ಉೊಂಟ್ಟಗರುವುದಿೊಂದ ಮಳೆ ನಿೋರಿಗೆ ಕೆರೆಗಳು ತ್ತೊಂಬುತಿು ಲಿ . ನಿೋರಾವರಿಯಲಿ್ಲ ಕೆರೆಗಳ್ನ್ನನ ಹರತ್ತಪ್ಡಿಸಿದರೆ.

ಬಾವಿಗಳು ಪ್ಾ ಮುಖ್ ಪ್ರತಾ ವಹಿಸ್ತತು ವೆ. ಹಿೊಂದೆ ಕಪಿಲೆ ಮತ್ತು ಏತದ ಮೂಲಕ ನಿೋರನ್ನನ ಮೇಲಕೆಕ

ತ್ರಗೆಯುತಿು ದದ ರು. ಇತಿು ೋಚೆಗೆ ತ್ರರೆದ ಬಾವಿಗಳು ನಿೋರಿಲಿದೆ ಒಣ್ಗ ಬಣ್ಗುಡುತಿು ವೆ. ಸ್ತಮಾರು 450 ಅಡಿ ಆಳ್ದಿೊಂದ

1200 ಅಡಿ ಆಳ್ದವರೆಗನ ಕೊಳ್ವೆ ಬಾವಿಗಳ್ನ್ನನ ಕೊರೆಸಿ ಆ ಮೂಲಕ ನಿೋರನ್ನನ ಹರತ್ರಗೆದು ಕೃಷ್ಠಗೆ

ಬಳ್ಸಲಾಗುತಿು ದೆ.

ಕುಡಿಯುವ ನಿೋರಿಗ್ರಗ ಒೊಂದು ಎತು ರದ ಮೇಲಾಪ ಟ್ಟ ಇದೆ (ಓವರ್ಟ್ಟಾ ೊಂಕ್) ಇದಕೆಕ ನಿೋರನ್ನನ ಸಂಗಾ ಹಿಸಿ

ಗ್ರಾ ಮಸಥ ರಿಗೆ ಸವಿಜನಿಕ ಮತ್ತು ವಯಕಿು ಕ ಕೊಳಾಯ ಸಂಪ್ಕಿಗಳ್ ಮೂಲಕ ನಿೋರನ್ನನ ಒದಗಸಲಾಗುತಿು ದೆ.

ಕಿರು ನಿೋರು ಸರಬರಾಜು ಯೋಜನೆಯಡಿಯಲಿ್ಲ 20ಕೂಕ ಅರ್ಧಕ ರ್ಮನಿಟ್ಟಾ ೊಂಕ್ಗಳ್ನ್ನನ ಇಡಲಾಗದೆ. ಮತ್ತು

ಒತ್ತು ವ ಕೈಪಂಪುಗಳವೆ.

ಜನಸಂಖ್ಯಯ

ಅಮಮ ನಘಟ್ಟ ಗ್ರಾ ಮದಲಿ್ಲ ಒಟ್ಟಟ 427 ಮನೆಗಳದುದ 2138 ಜನಸಂಖೆಾ ಯನ್ನನ ಹೊಂದಿದುದ 1086

ಪುರುಷ್ರು 1052 ಮಹಿಳೆಯರಿದ್ಯದ ರೆ. 1000ಕೆಕ 969ರಷ್ಟಟ ಲ್ಲೊಂಗ್ರನ್ನಪ್ರತವಿದೆ. ಶೇ.67.4%ರಷ್ಟಟ ಸಕ್ಷರತ್ರಯದೆ.

ಇಲಿ್ಲ ಕಾೊಂಕಿಾ ಟ್ ಮನೆಗಳು ಹೆೊಂಚ್ಚ ಮತ್ತು ಶಿೋಟ್ಮನೆಗಳವೆ. ಸಕಾಿರಿ ವಸತಿ ಯೋಜನೆಗಳಾದ ಆಶ್ಾ ಯಮನೆಗಳು

ಜನತಾಮನೆಗಳು ಇೊಂದಿರಾ ಆವಾಸ್ ಯೋಜನೆ, ಬಸವ ಯೋಜನೆಯಲಿ್ಲ ಮನೆ ಪ್ಡೆದಿರುವ

ಫಲಾನ್ನಭವಿಗಳದ್ಯದ ರೆ.

Page 5: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 5

Volume- 2 Issue-2 May-August : 2019

ISSN: 2581-8511

ಪ್ರರ ಗಿತಿಹಾಸ್ ಮ್ತ್ತಾ ಚಾರಿತಿರ ಕ ಹಿನೆೆ ಲೆ

ಒೊಂದು ನಿದಿಿಷ್ಟ ಪ್ಾ ದೇಶ್ದ ಸೊಂಸಕ ೃತಿಕ ಚರಿತ್ರಾ ಯ ಮಹತವ ವನ್ನನ ಆ ಪ್ಾ ದೇಶ್ದಲಿ್ಲ ಮಾನವ

ಬಳ್ಸಿಬ್ಬಟ್ಟಟ ಹೋಗರುವ ಪ್ಳೆಯುಳಕೆಗಳು ಮತ್ತು ಅವರು ನಿರ್ಮಿಸಿರುವ ಹಲವಾರು ಸಮ ರಕಾವಶೇಷ್ಗಳೊಂದ

ತಿಳಯಬಹುದು.

ಈ ಗ್ರಾ ಮವು ಪ್ರಾ ಗತಿಹಾಸ ಕಾಲದಿೊಂದಲೂ ಹೆಚಿ್ಚ ಮಹತವ ಪ್ಡೆದಿದೆ. ಈ ಗ್ರಾ ಮದಲಿ್ಲ ಕೆಷ ೋತಾ ಕಾಯಿ

ಕೈಗೊಂಡಾಗ, ಕಾವ ಟ್ಿಜೈಟ್ ಶಿಲೆಯೊಂದ ಮಾಡಿರುವ ಮತ್ತು ಚಕೆಕ ಗಳ್ನ್ನನ ಎಬಿ್ಬ ರುವ ಸೂಕ್ಷಮ ಶಿಲಾಯುಗದ

ಉಪ್ಕರಣ್ಗಳು ಪ್ತ್ರು ಯಾಗವೆ. ಇದೇ ಗ್ರಾ ಮದ ತಳ್ವಾರಿಕೆ ಕೆಲಸ ನಿವಿಹಿಸ್ತವ ಗೋವಿೊಂದಯಾ ನವರಿಗೆ

ನಿೋಡಿರುವ ಸವೇಿನಂಬರ್ 159ರ ಇನಾೊಂ ಭೂರ್ಮಯಲಿ್ಲ ನವಶಿಲಾಯುಗದ ಒೊಂದು ಕೈಗಡಲ್ಲ ಪ್ತ್ರು ಯಾಗದೆ.

ಡೋಲ್ರೈಟ್ ಶಿಲೆಯೊಂದ ತಯಾರಿಸಿದುದ ಬೂದು ಬಣಿ್ ದಿೊಂದ ಕೂಡಿದೆ. ಗಡುಸದ, ಮತ್ತು ಭಾರವಾದ

ತಿಾ ಕೊೋನಾಕಾರದ ಕೊಡಲ್ಲಯು 21.ಸ್ಥೊಂರ್ಮೋ ಉದದ 7.5 ಸ್ಥೊಂ.ರ್ಮೋ ಅಗಲವಾಗದೆ. ಕೊಡಲ್ಲಯ ಒೊಂದು ಭಾಗ

ಚೂಪ್ರಗದದ ರೆ ಮತೊು ೊಂದು ಬದಿಯನ್ನನ ಉಜಿಾ ನಯಗಳಸಿರುವುದರಿೊಂದ ಹರಿತವಾಗದೆ.

ಈ ಆಯುಧವನ್ನನ ಉಜಿಾ ನಯಗಳಸಲ್ಲ ಬಳ್ಸಿರುವ ಒೊಂದು ಸಣೆಕಲಿ್ಲ ಕೂಡ ಪ್ತ್ರು ಯಾಗದೆ. ಹಾಗ್ರಗ

ಈ ಗ್ರಾ ಮವು ಪ್ರಾ ಗತಿಹಾಸದ ಜೊತ್ರ ಸಂಬಂಧ ಹೊಂದಿರುವುದು ತಿಳಯುತು ದೆ. ಆದರೆ ಇದು ಒೊಂದು

ಪ್ರಾ ಗತಿಹಾಸಕಾಲದ ನೆಲೆಯಾಗತ್ತು ಎೊಂದು ಸಪ ಷ್ಟ ವಾದ ನಿಧಾಿರಕೆಕ ಬರಲ್ಲ ಸಧಾ ವಾಗಲಿ .

ಈ ಗ್ರಾ ಮವು ಪ್ರೊೋಕ್ಷವಾಗ ಅನೇಕ ರಾಜಮನೆತಗಳ್ ಆಳವ ಕೆಗೆ ಒಳ್ಪ್ಟ್ಟಟ ದೆಯೊಂದ್ಯದರೂ ವಿಜಯನಗರ

ಸಮಾಾ ಜಾ ಕಾಲಕಿಕ ೊಂತ ಪೂವಿ ಆಡಳತಕೆಕ ಸಂಬಂರ್ಧಸಿದ ಯಾವುದೇ ಆಧಾರಗಳು ದೊರೆಯುವುದಿಲಿ .

ವಿಜಯನಗರ ಕಾಲಘಟ್ಟ , ವಿಜಯನಗರೊೋತು ರ ಕಾಲಕೆಕ ಸಂಬಂಧ ಪ್ಟ್ಟ ೊಂತಹ ವಿೋರಗಲಿ್ಲ ಗಳು ಮತ್ತು

ಧಾರ್ಮಿಕ ಸಮ ರಕಗಳು ಕಂಡುಬರುತು ವೆ. ಇೊಂತಹ ಪುರಾತತವ ಅವಶೇಷ್ಗಳು ಸಂಸಕ ೃತಿಯ ರಚನೆಯಲಿ್ಲ ಪ್ಾ ಮುಖ್

ಪ್ರತಾ ವನ್ನನ ವಹಿಸ್ತತು ವೆ. ಈ ಭಾಗದಲಿ್ಲ ವಿಜಯನಗೋರತು ರ ಕಾಲದಲಿ್ಲ ಸಣಿ್ ಪ್ರಳೇಯ ಪ್ಟ್ಟಟ ಗಳಾದ ಗುಬಿ್ಬ

ಹಸಹಳಳ ಪ್ರಳೇಯಗ್ರರರು, ಬ್ಬದಿರೆ ಪ್ರಳೇಯಗ್ರರರು, ಹಾಗಲವಾಡಿ ಪ್ರಳೇಯಗ್ರರರು ವಿಜಯನಗರ

ಕಾಲದಿೊಂದ ಪ್ಾ ಸಿದಿಧ ಪ್ಡೆದ ಈ ಮನೆತನಗಳು ವಿಜಯನಗರದ ಅವನತಿಯ ನಂತರ ತಮಮ ಸವಿಭೌಮತವ ವನ್ನನ

ವಿಸು ರಿಸಿಕೊೊಂಡು ಜನಪಿಾ ಯ ಪ್ಾ ಭುಗಳೆನಿಸಿದರು. ಸಥ ಳೋಯವಾಗ ಪ್ಾ ಬಲರಾಗದದ ಪ್ರಳೇಯಗ್ರರರು ತಮಮ ತಮಮ

ಪ್ರಳೇಯಪ್ಟ್ಟಟ ಗಳ್ನ್ನನ ಸಂಸಥ ನವೆೊಂದು ಕರೆದುಕೊೊಂಡು ಕೊಂದಾ ಸಥ ನಗಳ್ನಾನ ಗ ಮಾಡಿಕೊೊಂಡು

ಸ್ತತು ಮುತು ಲ್ಲನ ಪ್ಾ ದೇಶ್ಗಳ್ನ್ನನ ತಮಮ ಇಡಿತದಲಿ್ಲಟ್ಟಟ ಕೊೊಂಡು ಆಳವ ಕೆ ನಡೆಸಿದ್ಯದ ರೆ. ಆ ಮೂಲಕ ತಮಮ ನ್ನನ

ಅರಸರೆೊಂದು ಹೆಸರಿಸಿಕೊಳ್ಳ ಲ್ಲ ಶ್ಾ ರ್ಮಸಿದ್ಯದ ರೆ.

ಮೈಸೂರು ಒಡೆಯರ ಕಾಲದಲಿ್ಲ ಘೌಜುದ್ಯರರ ಆಳವ ಕೆ ಪ್ರಾ ರಂಭಗೊಂಡಿತ್ತ. ಹೈದರಾಲ್ಲ ಮತ್ತು ಟ್ಟಪುಪ

ಸ್ತಲಾು ನನ ಕಾಲದಲಿ್ಲ ಪ್ರಳೇಯಗ್ರರರು ಅರ್ಧಕಾರ ಕಳೆದುಕೊೊಂಡು ಕುಗೆ ಹೋದರು. ಕಾಲಾನಂತರದಲಿ್ಲ

ಮೈಸೂರು ಸಂಸಥ ನವನ್ನನ ಬ್ಬಾ ಟ್ಟೋಷ್ರು ತಮಮ ಆಳವ ಕೆಗೆ ಒಳ್ಪ್ಡಿಸಿಕೊೊಂಡರು ಶೋಷ್ಣೆಗೆ ಒಳ್ಗ್ರದ ಜನರು

ಬ್ಬಾ ಟ್ಟೋಷ್ರ ವಿರುದಧ ವಾಗ ಗ್ರೊಂರ್ಧೋಜಿಯವರಂತಹ ಮಹಾನ್ ಸವ ತಂತಾ ಾ ಹೋರಾಟ್ಗ್ರರರ ಪ್ಾ ಭಾವದಿೊಂದ

ಬ್ಬಾ ಟ್ಟೋಷ್ರ ವಿರುದದ ಹೋರಾಟ್ಕೆಕ ಇಡಿೋ ರಾಷ್ಟ ರವೇ ಆೊಂದೊೋಲನದಲಿ್ಲ ಪ್ರಲೆೊಂಡಿತ್ತು . ಈ ಅಮಮ ನಘಟ್ಟ

ಗ್ರಾ ಮದ ಜನತ್ರಯು ಅದರಿೊಂದ ಹರತಾಗರಲ್ಲಲಿ . ಸವ ತಂತಾ ಾ ನಾಡು, ನ್ನಡಿ, ಸಂಸಕ ೃತಿಯ ಬಗೆೆ ಈ ಗ್ರಾ ಮದ

ಜನರು ಗ್ರಢವಾದ ಅಭಿಮಾನವುಳ್ಳ ವರಾಗದದ ರು. ಸವ ತಂತಾ ಾ ಕಾಕ ಗ ಹೋರಾಡಿದ ಈ ಗ್ರಾ ಮದ ನಿವೃತು ಶಿಕ್ಷಕರಾದ

ದಿವಂಗತ ಬಸವಲ್ಲೊಂಗಯಾ , ದಿವಂಗತ ಸಿದದ ಲ್ಲೊಂಗಪ್ಪ , ದಿವಂಗತ ಅಡವಿೋಶ್ಪ್ಪ , ದಿವಂಗತ ಮೃತ್ತಾ ೊಂಜಯಪ್ಪ ,

ದಿವಂಗತ ಸಿದಧ ನಂಜಪ್ಪ , ಬ್ಬಾ ಟ್ಟೋಷ್ರ ವಿರುದಧ ಹೋರಾಡಿದ ಪುಣ್ಾ ಪುರುಷ್ರಾಗದುದ ಗ್ರಾ ಮದ ಹೆಮೆಮ ಯ

ಪ್ಾ ತಿೋಕವಾಗದ್ಯದ ರೆ.

Page 6: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 6

Volume- 2 Issue-2 May-August : 2019

ISSN: 2581-8511

ದೇವಾಲಯಗಳು

ದೇವಾಲಯಗಳು ಈ ಗ್ರಾ ಮದ ಧಾರ್ಮಿಕ ಮತ್ತು ಸೊಂಸಕ ೃತಿಕ ಕೊಂದಾ ಗಳಾಗವೆ. ಸೊಂಪ್ಾ ದ್ಯಯಕ

ಸಂಸಕ ೃತಿಯುಳ್ಳ ಗ್ರಾ ಮದಲಿ್ಲ ದೇವತಾರಾದನೆಯು ಸಂಸಕ ೃತಿಯ ಪ್ಾ ಮುಖ್ ಲಕ್ಷಣ್ವಾಗದೆ. ಇಲಿ್ಲನ ಜನತ್ರ

ನೆಮಮ ದಿಯ ಜಿೋವನಕೆಕ ಪೂರಕವಾಗ ಕಂಡುಕೊೊಂಡಂತಹ ಮಾಗಿವೇ ದೇವತ್ರಯ ಆರಾಧನೆ. ಇಲಿ್ಲನ ಜನರು

ನಂಬ್ಬರುವ ಅಭೂತಪೂವಿ ಶ್ಕಿು ಗಳ್ಲಿ್ಲ ದೈವಿಕ ಶ್ಕಿು ಯು ಪ್ಾ ಮುಖ್ವಾದುದ್ಯಗದೆ. ಈ ಗ್ರಾ ಮದಲಿ್ಲ ನಾಲ್ಲಕ

ದೇವಾಲಯಗಳದುದ ಎರಡು ಶೈವ, ಒೊಂದು ವೈಷಿ್ ವ ಮತ್ತು ಒೊಂದು ಶಾಕು ಪಂಥದ ದೇವಾಲಯಗಳಾಗವೆ. ಇಲಿ್ಲನ

ಶೈವ ದೇವಾಲಯಗಳು ವಿಜಯನಗರ ಕಾಲಘಟ್ಟ ದಲಿ್ಲ ನಿಮಾಿಣ್ಗೊಂಡಿದುದ ಇತಿು ೋಚೆಗೆ ಇವುಗಳ್ನ್ನನ

ಜಿೋರ್ೋಿದ್ಯದ ರಗಳಸಿದದ ರೆ ವೈಷ್ಿ ವ ದೇವಾಲಯ ಪ್ರಳೇಯಗ್ರರರ ಕಾಲದಲಿ್ಲ ನಿರ್ಮಿಸಲಾಗತ್ತು . ಆದರೆ ಈ

ವೈಷ್ಿ ವ ದೇವಾಲಯವನ್ನನ ಸಂಪೂಣ್ಿವಾಗ ಹಸದ್ಯಗ ನಿರ್ಮಿಸಲಾಗದೆ.

ಇಲಿ್ಲನ ಮಹಾಲ್ಲೊಂಗೇಶ್ವ ರ ದೇವಾಲಯ ಪೂವಾಿಭಿಮುಖ್ವಾಗದುದ ಗಭಿಗುಡಿ, ಸ್ತಖ್ನಾಸಿ ಮತ್ತು

ಮಂಟ್ಪ್ವನ್ನನ ಒಳ್ಗೊಂಡಿದೆ. ಗಭಿಗುಡಿಯಲಿ್ಲ ಲ್ಲೊಂಗುವಿದೆ. ಇದರಲಿ್ಲ ಬಾ ಹಮ ಪಿೋಠ, ವಿಷಿ್ಟ ಪಿೋಠ

ಪ್ರಣಿಪಿೋಠವಿದುದ , ಪ್ರಣಿಪಿೋಠದ ಮೇಲೆ ಲ್ಲೊಂಗುವನ್ನನ ಪ್ಾ ತಿಷಿ್ಠಪಿಸಲಾಗದೆ. ಅದರ ಹಿೊಂಭಾಗದಲಿ್ಲ ಲೋಹದಿೊಂದ

ನಿರ್ಮಿಸಿರುವ ಮಹಾಲ್ಲೊಂಗೇಶ್ವ ರನ ಮೂತಿಿಯದೆ. ಮತ್ತು ಪ್ಾ ಭಾವಳಯದೆ. ಗಭಿಗುಡಿಯ ಮುೊಂದೆ

ಸ್ತಖ್ನಾಸಿಯದುದ ಸ್ತಮಾರು 1/2 ಅಡಿ ವೇದಿಕೆಯ ಮೇಲೆ ಗಭಿಗುಡಿಯಲಿ್ಲನ ಲ್ಲೊಂಗುವಿಗೆ ಅಭಿಮುಖ್ವಾಗ

ಕಪುಪ ಶಿಲೆಯಲಿ್ಲ ನಂದಿ ವಿಗಾ ಹವನ್ನನ ಪ್ಾ ತಿಷಿ್ಠಪಿಸಲಾಗದೆ. ಆಕಷ್ಿಕ ಡುಬಿ ಅಲಂಕಾರಿಕ ಸರಪ್ಳಗಳವೆ. ಇದೇ

ಭಾಗದಲಿ್ಲ ಉತು ರಾಭಿಮುಖ್ವಾಗ ಒೊಂದು ಗಣೇಶ್ ವಿಗಾ ಹವನ್ನನ ಪ್ಾ ತಿಷಿ್ಠಪಿಸಿದ್ಯದ ರೆ. ಸ್ತಖ್ನಾಸಿಯ ಮುೊಂದೆ

ಮಂಟ್ಪ್ವಿದುದ ಅದರಲಿ್ಲ ಎರಡು ವೃತಾು ಕಾರದ ಸಧಾರಣ್ ಕಂಭಗಳದುದ ಮೇಲಾಾ ವಣಿಯನ್ನನ ಹತ್ತು

ನಿೊಂತಿವೆ. ದೇವಾಲಯದ ಮುೊಂಭಾಗದಲಿ್ಲ ಅಭಿಮುಖ್ವಾಗ ನಿರ್ಮಿಸಿರುವ ನಂದಿ ಮಂಟ್ಪ್ವಿದೆ. ದೇವಾಲಯದ

ಮೇಲಾಾ ವಣಿಯ ಮುೊಂದಿನ ಭಾಗದಲಿ್ಲ ದೇವ ಕೊೋಷಿ್ ಕಗಳದುದ ಮಧಾ ದ ಕೊೋಷಿ್ ಕದಲಿ್ಲ ಈಶ್ವ ರ, ಗಣೇಶ್ ಮತ್ತು

ಪ್ರವಿತಿ ಶಿಲಪ ಗಳವೆ. ಅದರ ಮೇಲೆ ಕಳ್ಶ್ವಿದೆ. ಅದರ 2 ಬದಿಯ ಕೊೋಷಿ್ ಕಗಳ್ಲಿ್ಲ ಒೊಂದರಲಿ್ಲ ಗಣೇಶ್ ತಬಲ

ಹಿಡಿದು ನಿೊಂತಿರುವ ಮತ್ತು ಮತೊು ೊಂದು ವಿೋಣೆ ಹಿಡಿದು ನಿೊಂತಿರುವ ಶಿಲಪ ಗಳವೆ. ದೇವಾಲಯದ ಮೇಲೆ ನಾಲ್ಲಕ

ಮೂಲೆಗಳ್ಲಿ್ಲ ನಾಲ್ಲಕ ನಂದಿಯನ್ನನ ಪ್ಾ ತಿಷಿ್ಠಪಿಸಲಾಗದೆ. ದೇವಾಲಯಕೆಕ ಹೊಂದಿಕೊೊಂಡಂತ್ರ ಒೊಂದು ಕಲಿ್ಲನ

ಮಂಟ್ಪ್ವಿದೆ ಅಮವಾಸ್ಥಾ ಯ ವಿಶೇಷ್ ಪೂಜೆಯಲಿ್ಲ ಮತ್ತು ಇತರ ಧಾರ್ಮಿಕ ಕಾಯಿಗಳ್ಲಿ್ಲ

ಬಳ್ಸಿಕೊಳ್ಳ ಲಾಗುತು ದೆ. ದೇವಾಲಯದ ಮುೊಂದಿನ ಆವರಣ್ದಲಿ್ಲ ಒೊಂದು ಮಜಾ ನ ಭಾವಿಯದುದ ನಿೋರಿಲಿದೆ

ಬತಿು ಹೋಗದೆ. ಈ ದೇವಾಲಯ ಕೆರೆಯ ದಡದಲಿ್ಲದುದ ಮುಜರಾಯ ಇಲಾಖೆಗೆ ಸೇರಿದೆ.

ವಿೀರಭದ್ರ ದೇವಾಲಯ

ವಿೋರಭದಾ ದೇವಾಲಯವು ಊರ ಮುೊಂಭಾಗದಲಿ್ಲ ಪೂವಾಿಭಿಮುಖ್ವಾಗದೆ. ಈ ದೇವಾಲಯದಲಿ್ಲ

ಗಭಿಗುಡಿ, ಸ್ತಖ್ನಾಸಿ, ಮಂಟ್ಪ್, ತ್ರರೆದ ಮಂಟ್ಪ್ಗಳವೆ. ಗಭಿಗುಡಿಯಲಿ್ಲ 11/2 ಅಡಿ ಪಿೋಠದ ಮೇಲೆ ವಿೋರಭದಾ

ಮೂತಿಿಯನ್ನನ ಪ್ಾ ತಿಷಿ್ಠಪಿಸಲಾಗದೆ. ಅದರ ಹಿೊಂದೆ ಲೋಹದ ಪ್ಾ ಭಾವಳಯದೆ. ವಿೋರಭದಾ ಮೂತಿಿಯ

ಮುಖ್ವಾಡ ಮತ್ತು ಕತಿು ಯನ್ನನ ಬಳಳ ಯೊಂದ ಮಾಡಿಸಿ ಇಟ್ಟಟ ದ್ಯದ ರೆ. ಗಭಿಗುಡಿಯ ಮುೊಂದೆ ಸ್ತಖ್ನಾಸಿಯದುದ

ಇದರ ಬಾಗಲ್ಲವಾಡಕೆಕ ಹಿತಾು ಳೆಯೊಂದ ಮಾಡಿರುವ ಬಾಗಲ್ಲವಾಡವನ್ನನ ಜೊೋಡಿಸಿದ್ಯದ ರೆ. ಅಲಂಕಾರಿಕ ಲತಾ

ಸ್ತರುಳಗಳು. ಎಡ ಮತ್ತು ಬಲಬದಿಯಲಿ್ಲ ಆಕಷ್ಿಕ ದ್ಯವ ರಪ್ರಲಕ ವಿಗಾ ಹಗಳವೆ. ಲಲಿಾಟ್ ಬ್ಬೊಂಬವು ತ್ತೊಂಬಾ

ಆಕಷ್ಿಣಿೋಯವಾಗದುದ ನಂದಿ ಮತ್ತು ಶಿವಲ್ಲೊಂಗವನ್ನನ ಇಡಲಾಗದೆ. ಸ್ತಖ್ನಾಸಿಯ ಒಳ್ಭಾಗದಲಿ್ಲ ಬಲಭಾಗಕೆಕ

ಗಣೇಶ್ ಮೂತಿಿಯದದ ರೆ ಎಡಭಾಗದಲಿ್ಲ ಉತಸ ವ ಮೂತಿಿಗಳ್ನಿನ ಟ್ಟಟ ದ್ಯದ ರೆ. ಸ್ತಖ್ನಾಸಿಯ ಮುೊಂದೆ

ಮಂಟ್ಪ್ವಿದುದ ಎರಡು ಕಂಭಗಳವೆ. ಇವುಗಳು ಮಂಟ್ಪ್ದ ಮೇಲಾಾ ವಣಿಯನ್ನನ ಹತ್ತು ನಿೊಂತಿವೆ. ಕಂಭಗಳ್ಲಿ್ಲ

Page 7: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 7

Volume- 2 Issue-2 May-August : 2019

ISSN: 2581-8511

ಮೇಲಾಾ ಗ ಮತ್ತು ಕೆಳ್ಭಾಗ ಚೌಕಾಕಾರವಾಗದುದ 8 ಪ್ಟ್ಟಟ ಕೆಗಳವೆ. ಸಧಾರಣ್ವಾದ ನಾಲ್ಲಕ ಮುಖ್ದ

ಬೋರ್ಧಗೆಗಳವೆ. ದೇವಾಲಯದ ಮೇಲಾಾ ವಣಿಯ 4 ಮೂಲೆಗಳ್ಲಿ್ಲ ಎರಡು ದೇಹ ಒೊಂದು ಮುಖ್ವುಳ್ಳ

ನಂದಿಗಳವೆ. ಮೇಲಾಾ ವಣಿಯ ಮೇಲಾಾ ಗದ ಮುೊಂಭಾಗದಲಿ್ಲ ಅಲಂಕಾರಿಕ ದೇವಕೊೋಷಿ್ ಕವಿದುದ ಗಣೇಶ್ನನ್ನನ

ಪ್ಾ ತಿಷಿ್ಠಪಿಸಲಾಗದೆ. ಅದರ ಮೇಲೆ ಕಳ್ಶ್ವಿದೆ. ಗಭಿಗುಡಿಯ ಮೇಲೆ ಸಥ ಳೋಯ ಶೈಲ್ಲಯ ಶಿಖ್ರವಿದುದ ಶಿಖ್ರದ

ಎರಡು ಮೂಲೆಯಲಿ್ಲ ಹಿೊಂದಕೆಕ ಮುಖ್ಮಾಡಿರುವ ಎರಡು ನಂದಿಗಳದದ ರೆ ಶಿಖ್ರದ ಕಳ್ಶ್ದ ಕೆಳ್ಭಾಗದಲಿ್ಲ 4

ದಿಕುಕ ಗಳಗೂ 2 ದೇಹದ ಒೊಂದು ಮುಖ್ವುಳ್ಳ ನಂದಿಗಳವೆ. ಶಿಖ್ರದ ಮೇಲೆ ಲೋಹದಿೊಂದ ಮಾಡಿರುವ ಕಳ್ಶ್ವನ್ನನ

ಇಡಲಾಗದೆ. ಈ ದೇವಾಲಯವು ಮುಜರಾಯ ಇಲಾಖೆ ಅರ್ಧೋನಕೆಕ ಒಳ್ಪ್ಟ್ಟಟ ದೆ.

ರಂಗನಾಥಸಾ ಮಿ ದೇವಾಲಯ

ಅಮಮ ನಘಟ್ಟ ಊರ ಮುೊಂದೆ ಪೂವಾಿಭಿಮುಖ್ವಾಗ ಈ ದೇವಾಲಯವಿದೆ. ಈ ದೇವಾಲಯದಲಿ್ಲ

ಗಭಿಗುಡಿ ಮತ್ತು ಮುಖ್ಮಂಟ್ಪ್ವಿದೆ. ಗಭಿಗುಡಿಯಲಿ್ಲ ಸ್ತಮಾರು 1 ಅಡಿ ಎತು ರದ ವೇದಿಕೆಯ ಮೇಲೆ

ರಂಗನಾಥನ ಮೂತಿಿಯನ್ನನ ಪ್ಾ ತಿಷಿ್ಠಪಿಸಲಾಗದೆ. ಅದರ ಹಿೊಂದೆ ಲೋಹದ ಪ್ಾ ಭಾವಳಯದೆ. ಗಭಿಗುಡಿಯ

ಮುೊಂದೆ ಮಂಟ್ಪ್ವಿದುದ ಮಂಟ್ಪ್ದ ಎಡಭಾಗದಲಿ್ಲ ಗಣೇಶ್ನನ್ನನ ಪ್ಾ ತಿಷಿ್ಠಪಿಸಲಾಗದೆ. ಬಲಭಾಗದಲಿ್ಲ ರಾಮ,

ಲಕ್ಷಮ ಣ್, ಸಿೋತ್ರಯನ್ನನ ಒಳ್ಗೊಂಡ ಲೋಹದ ಉತಸ ವ ಮೂತಿಿಗಳ್ನ್ನನ ಇಡಲಾಗದೆ. ಎರಡು ಸಧಾರಣ್

ಕಂಭಗಳದುದ ಮೇಲಾಾ ವಣಿಯನ್ನನ ಹತ್ತು ನಿೊಂತಿವೆ. ದೇವಾಲಯದ ಮುೊಂದೆ ಸ್ತಮಾರು ನಾಲ್ಲಕ ಅಡಿ ಎತು ರದ

ವೇದಿಕೆಯ ಮೇಲೆ 6 ಅಡಿ ಎತು ರದ ದಿೋಪ್ಸಥ ೊಂಭವಿದೆ. ಗಭಿಗುಡಿಯ ಮೇಲಾಾ ಗದಲಿ್ಲ ಶಿಖ್ರವಿದೆ. ಶಿಖ್ರದ

ತ್ತದಿಯಲಿ್ಲ ಲೋಹದ ಕಳ್ಶ್ವನ್ನನ ಇಡಲಾಗದೆ. ಈ ದೇವಾಲಯ ಮುಜರಾಯ ಇಲಾಖೆಯ ಅರ್ಧೋನಕೆಕ

ಒಳ್ಪ್ಟ್ಟಟ ದೆ.

ಶ್ರ ೀ ಕಾಂಪ್ಮ್ಮ ದೇವಾಲಯ (ಮಾರಮ್ಮ ದೇವಾಲಯ)

ಊರ ಮುೊಂಭಾಗದಲಿ್ಲ ರಂಗನಾಥ ಸವ ರ್ಮ ದೇವಾಲಯದ ಎಡಭಾಗದಲಿ್ಲ ಗ್ರಾ ಮದ ಶ್ಕಿು ದೇವತ್ರಯಾದ

ಮಾರಮಮ ನ ದೇವಾಲಯವಿದೆ. ಈ ದೇವಾಲಯದಲಿ್ಲ ಗಭಿಗುಡಿ ಮತ್ತು ಮುಖ್ಮಂಟ್ಪ್ವಿದೆ ಗಭಿಗುಡಿಯಲಿ್ಲ

ಹಿೊಂದೆ ಗೂಡಿನಲಿ್ಲ ಮಾರಮಮ ನನ್ನನ ಇಟ್ಟಟ ಪೂಜೆ ಮಾಡುತಿು ದದ ರು. ಆದರೆ ಇತಿು ೋಚೆಗೆ ಶಿಲೆಯೊಂದ ಮಾಡಿರುವ

ವಿಗಾ ಹವನ್ನನ ತಂದು ಪ್ಾ ತಿಷಿ್ಠಪಿಸಲಾಗದೆ. ಗೂಡಿನಲಿ್ಲದದ ದೇವರನ್ನನ ಮೆರವಣಿಗೆ ದೇವರಾಗ

ಮುಖ್ಮಂಟ್ಪ್ದಲಿ್ಲಟ್ಟಟ ದ್ಯದ ರೆ. ಮಂಟ್ಪ್ದಲಿ್ಲ ಎರಡು ಸಧಾರಣ್ ಕಂಭಗಳದುದ ಇಡಿೋ ದೇವಾಲಯದ

ಮೇಲಾಾ ವಣಿಯನ್ನನ ಹತ್ತು ನಿೊಂತಿವೆ.

ವಿೀರಗಲ್ಲು ಗಳು ಮ್ತ್ತಾ ಮ್ಹಾಸ್ತಿಕಲ್ಲು

ಅಮಮ ನಘಟ್ಟ ದ ಪ್ರರಂಪ್ರಿಕ ಸಂಸಕ ೃತಿಯನ್ನನ ಬ್ಬೊಂಬ್ಬಸ್ತವ ವಿೋರಗಲಿ್ಲ ಮತ್ತು ಮಹಾಸತಿ ಕಲಿ್ಲ ಗಳು

ಕಂಡುಬಂದಿವೆ. ಈ ಗ್ರಾ ಮದ ಜನರು ಧಾರ್ಮಿಕ ನೆಲೆಗಟ್ಟಟ ನಿೊಂದ ಹೆಚಿ್ಚ ಪ್ಾ ಭಾವಿತಗೊಂಡಿದುದ ಪ್ರಾ ಚೋನ

ಕಾಲದಿೊಂದಲೂ ಸದೆತಿ ಮತ್ತು ಮೊೋಕ್ಷವನ್ನನ ಪ್ಡೆಯುವುದನೆನ ೋ ತಮಮ ಗುರಿಯಾಗಟ್ಟಟ ಕೊೊಂಡು ಜಿೋವನ

ಸಗಸ್ತತಿು ದ್ಯದ ರೆ. ಇವರ ಜಿೋವನದಲಿ್ಲ ಮರಣ್, ಸಮಾರ್ಧ, ಬಲ್ಲದ್ಯನ, ವಿೋರಮರಣ್ ಮುೊಂತಾದವುಗಳು

ಸಮಾಜದಲಿ್ಲ ಪ್ರಂಪ್ರೆಯೊಂದ ಬಂದಿರುವ ಆಚರಣೆಗಳಾಗವೆ. ಇೊಂತಹ ಅಸಮಾನಾ ವಿಶಿಷ್ಟ ಮರಣ್ಗಳ್ನ್ನನ

ಪ್ರಾ ಚೋನ ಕಾಲದಿೊಂದಲೂ ಗುರುತಿಸಬಹುದ್ಯಗದೆ. ಇದರ ನೆನಪಿಗ್ರಗ ಕಲಿ್ಲನಲಿ್ಲ ವಿೋರರ ಕೆತು ನೆ, ಮಹಾಸತಿಗಲಿ್ಲ

ಪ್ಾ ತಿಷಿ್ಠಪಿಸ್ತವ ಪ್ರಂಪ್ರೆ ಸಮಾಜದ ಸಂಸಕ ೃತಿಯಲಿ್ಲ ಬಳೆದು ಬಂದಿದೆ.

ಅಮಮ ನಘಟ್ಟ ಗ್ರಾ ಮದಲಿ್ಲ ನಾಲ್ಲಕ ವಿೋರಗಲಿ್ಲ ಗಳು ಕಂಡುಬರುತು ವೆ. ಈ ವಿೋರಗಲಿ್ಲ ಗಳ್ ಮೇಲೆ ಯಾವುದೇ

ಶಾಸನ ಕಂಡುಬರದೇ ಇರುವುದರಿೊಂದ ಕಾಲವನ್ನನ ನಿಧಿರಿಸ್ತವಲಿ್ಲ ಗೊಂದಲ ಉೊಂಟ್ಟಯತ್ತ. ಇತಿಹಾಸ ತಜಞ ರ

Page 8: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 8

Volume- 2 Issue-2 May-August : 2019

ISSN: 2581-8511

ಜೊತ್ರಯಲಿ್ಲ ಚಚಿಸಿದ್ಯಗ ಈ ವಿೋರಗಲಿ್ಲ ಗಳು ಸ್ತಮಾರು 15ನೇ ಶ್ತಮಾನಕೆಕ ಸಂಬಂಧಪ್ಟ್ಟ ವು ಎೊಂಬ

ಒಮಮ ತಕೆಕ ಬರಲಾಗದೆ.

ಒೊಂದನೇ ವಿೋರಗಲಿ್ಲ , ಇದೇ ಗ್ರಾ ಮದ ವಿೋರಭದಾ ಸವ ರ್ಮ ದೇವಾಲಯದ ಅಚಿಕರಾದ ಲೇ||ಚಂದಾ ಯಾ ನವರ

ಜರ್ಮೋನಿನ ತೊೋಟ್ದ ಬದುವಿನಲಿ್ಲ ಇದೆ. ಇದು ಪ್ಾ ಥಮ ನೋಟ್ಕೆಕ ವಿೋರಗಲಿೊಂತ್ರ ಕಂಡರೂ. ಅದರ ಎಡ ಮತ್ತು

ಬಲಕೆಕ ಇರುವ ಕಲಿ್ಲ ಚಪ್ಪ ಡಿಗಳ್ನ್ನನ ಗಮನಿಸಿದ್ಯಗ ವಿೋರರ ಗುಡಿಯಾಗದಿದ ರಬಹುದು ಎೊಂದು ಸಪ ಷ್ಟ ವಾಗುತು ದೆ.

ಆ ಕಲಿ್ಲ ಗಳು ಇೊಂದಿಗೂ ಕೂಡ ಅಲಿೆೋ ಇವೆ. ಇಲಿ್ಲ ಇರುವ ವಿೋರಗಲಿ್ಲ ಪೂವಾಿಭಿಮುಖ್ವಾಗದುದ ಸ್ತಮಾರು

ಎರಡು ಅಡಿ ಅಗಲ ಮತ್ತು ಸ್ತಮಾರು ಎರಡೂವರೆ ಅಡಿ ಎತು ರವಾಗದೆ. ಇದು ಮೊಣ್ಕಾಲ್ಲನವರೆಗೆ

ಭೂರ್ಮಯಲಿ್ಲ ಹೂತಿರುವುದರಿೊಂದ ನಿರ್ಧಿಷ್ಟ ವಾಗ ಅಳ್ತ್ರಯನ್ನನ ಗುರುತಿಸಲ್ಲ ಸಧಾ ವಾಗುವುದಿಲಿ ಮತ್ತು

ಹೆಚಿ ನ ವಿವರಗಳು ತಿಳದುಬರುವುದಿಲಿ . ಈ ವಿೋರಗಲಿ್ಲನಲಿ್ಲ ವಿೋರನ್ನ ಎಡಗೈಯಲಿ್ಲ ಬ್ಬಲಿನ್ನನ , ಬಲಗೈಯಲಿ್ಲ

ಬಾಣ್ವನ್ನನ ಹಿಡಿದು ಹೋರಾಡುತಿು ರುವಂತ್ರ ಚತಿಾ ಸಲಾಗದೆ. ವಿೋರನ್ನ ಉದದ ನೆಯ ಜಡೆಯನ್ನನ ಬ್ಬಟ್ಟಟ ದುದ

ಸಮರೊೋಚತವಾದ ಉಡುಪ್ನ್ನನ ಧರಿಸಿದ್ಯದ ನೆ. ಕೈಗಳಗೆ ಕಡಗವನ್ನನ , ಕೊರಳಗೆ ಕಂಠಾಭರಣ್, ಸೊಂಟ್ದಲಿ್ಲ

ಕಟ್ಟಸೂತಾ ವನ್ನನ ಧರಿಸಿರುವನ್ನ ವಿೋರನ ಮೇಲಾಾ ಗದಲಿ್ಲ ಕಲಿ್ಲನ ತ್ತದಿಯ ಎರಡು ಭಾಗದಲಿ್ಲ ಸೂಯಿ ಮತ್ತು

ಚಂದಾ ನನ್ನನ ಚತಿಾ ಸಲಾಗದೆ. ಸೂಯಿನನ್ನನ ಚತಿಾ ಸಿರುವ ಕಡೆಯಲಿ್ಲ ಅಕ್ಷರಗಳ್ನ್ನನ ಕೊರೆಯಲ್ಲ

ಪ್ಾ ಯತಿನ ಸಿರುವಂತ್ರ ಗೋಚರಿಸ್ತತು ದೆ. ಆದರೆ ಅದರ ಸಪ ಷ್ಟ ತ್ರಯಲಿ

ಎರಡನೇ ವಿೋರಗಲಿ್ಲ ಇನಾೊಂ ಭೂರ್ಮ ಬೋರನಾಯಕ ನ ಜರ್ಮೋನಿನಲಿ್ಲ ಹಲಸಿನ ಗಡದ ಕೆಳ್ಗೆ ನೆಲದ

ಮೇಲೆ ಬ್ಬದಿದ ದೆ. ಇದು ವಿನಾಶ್ದ ಅೊಂಚನಲಿ್ಲದುದ ಏನನ್ಮನ ಸಪ ಷ್ಟ ವಾಗ ಗುರುತಿಸಲ್ಲ ಸಧಾ ವಾಗುವುದಿಲಿ

ವಿೋರಗಲಿ್ಲನಲಿ್ಲ ಕಲಿ್ಲನ ಚಕೆಕ ಗಳು ಎದಿದ ವೆ. ಕಪುಪ , ನಿೋಲ್ಲ ಛಾಯಯುಳ್ಳ ಬಳ್ಪ್ದ ಕಲಿ್ಲನಲಿ್ಲ ಕೆತು ಲಾಗದೆ. ಇದರಲಿ್ಲ

ಇಬಿ ರು ವಿೋರರನ್ನನ ಧನ್ನರ್ದ್ಯರಿಗಳ್ನಾನ ಗ ಬ್ಬಡಿಸಲಾಗದೆ. ವಿೋರರು ಸಮರೊೋಚತವಾದ ಉಡುಪ್ನ್ನನ ಧರಿಸಿ

ಕೆಳ್ಗೆ ಕಚಿೆ ಯನ್ನನ ಧರಿಸಿರುವಂತ್ರ ಕಾಣ್ಣವುದನ್ನನ ಬ್ಬಟ್ಟ ರೆ ಬೇರೆ ಯಾವುದೇ ಅೊಂಶ್ಗಳ್ಲಿ್ಲ ಸಪ ಷ್ಟ ತ್ರಯಲಿ .

ಇಬಿ ರು ವಿೋರರು ಕೂಡ ಬಲಗೈಯಲಿ್ಲ ಕತಿು ಎಡಗೈಯಲಿ್ಲ ಗುರಾಣಿ ಇಡಿದಿರುವಂತ್ರ ಚತಿಾ ಸಲಾಗದೆ. ಇಬಿ ರು

ವಿೋರರ ತಲೆಯ ತ್ತರುಬನ್ನನ ಬಲಭಾಗಕೆಕ ಬ್ಬಡಿಸಲಾಗದೆ. ಇದು ಸ್ತಮಾರು 2.5 ಅಡಿ ಉದದ 2 ಅಡಿ ಅಗಲವಾಗದೆ.

3ನೇ ವಿೋರಗಲಿ್ಲ ರಾಮಪ್ಪ ನ ಓಣಿಯಲಿ್ಲದೆ ಅಮಮ ನಘಟ್ಟ ದಿೊಂದ ತಿಪೂಪ ರಿಗೆ ಹೋಗುವ ಮಾಗಿದಲಿ್ಲ

ರಸ್ಥು ಯ ಬದಿಯಲಿ್ಲದೆ. ಈ ವಿೋರಗಲಿ್ಲ ಅತಾ ೊಂತ ಆಕಷ್ಿಣಿೋಯವಾಗದುದ ಪೂವಾಿಭಿಮುಖ್ವಾಗ ನಿಲಿ್ಲಸಲಾಗದೆ.

ಸ್ತಮರು 3 ಅಡಿ ಎತು ರವಾಗದುದ 2 ಅಡಿ ಅಗಲವಾಗದೆ. ವಿೋರಗಲಿ್ಲನಲಿ್ಲ ಕುದುರೆಯ ಮೇಲೆ ವಿೋರ ಆಸಿೋನ

ಭಂಗಯಲಿ್ಲ ಕುಳತಿು ದುದ ಎಡಗೈಯಲಿ್ಲ ಕುದುರೆಯ ಲಗ್ರಮನ್ನನ ಇಡಿದು ಬಲಗೈಯಲಿ್ಲ ಕಠಾರಿಯನ್ನನ ಹಿಡಿದು

ಹಿೊಂದಕೆಕ ಓರೆಗಣಿಿ ನಿೊಂದ ತಿರುಗ ನೋಡುತಿು ರುವಂತ್ರ ಚತಿಾ ಸಲಾಗದೆ. ವಿೋರನ್ನ ಕೈ ಮತ್ತು ಕಾಲೆಳಗೆ ಕಡಗವನ್ನನ

ಧರಿಸಿದುದ ತಲೆಗೆ ಪೇಟ್ ಕಟ್ಟಟ ರುವಂತ್ರ ಭಾಸವಾಗುತು ದೆ. ಕೊರಳಗೆ ಕಂಠಿಹಾರ ಧರಿಸಿದ್ಯದ ನೆ. ಕುದುರೆಗೆ ಹಾಕಿರುವ

ಮುಖ್ವಾಡ ಲಗ್ರಮು ಸಪ ಷ್ವಾಗ ಗೋಚರವಾಗುತು ದೆ. ಕುದುರೆ ಕಾಲ್ಲಗಳಗೂ ಕಾಲೆಳಗೆ ಕಡಗವನ್ನನ

ಹಾಕಲಾಗದುದ ಕುದುರೆಯು ಮುೊಂದಿನ ಕಾಲನ್ನನ ಎತಿು ಮುೊಂದೆ ಹೋಗುತಿು ರುವಂತ್ರ ಕಾಣ್ಣತು ದೆ. ಮುೊಂದೆ

ಬಲಭಾಗದಲಿ್ಲ ಒಬಿ ಸಿು ರೋಯನ್ನನ ನಿೊಂತ ಭಂಗಯಲಿ್ಲ ಕೆತು ಲಾಗದುದ ತನನ ಬಲಗೈ ಮೇಲೆತಿು

ಆಶಿೋವಿದಿಸ್ತತಿು ರವಂತ್ರ ಮತೊು ೊಂದು ಕೈ ದೇಹಕೆಕ ಅೊಂಟ್ಟಕೊೊಂಡಂತ್ರ ಇಳ ಬ್ಬಟ್ಟಟ ರುವಂತ್ರ ಚತಿಾ ಸಲಾಗದೆ. ಇದು

ವಿೋರನ ಸತಿ ಇರಬಹುದು. ಈ ವಿೋರಗಲಿ್ಲನ ಮೇಲಾಾ ಗದ ಎಡ ಮತ್ತು ಬಲಭಾಗದಲಿ್ಲ ಸೂಯಿ, ಚಂದಾ ರನ್ನನ

ಬ್ಬಡಿಸಲಾಗದೆ.

4ನೇ ವಿೋರಗಲಿ್ಲ (ಅಡುಗೆಭಟ್ಟ ) ಶಿವರುದಾ ಯಾ s/o ಗಂಗಣಿ್ ಜರ್ಮೋನಿನಲಿ್ಲದೆ. ಇದು ಸ್ತಮಾರು 4 ಅಡಿ

ಉದದ 2 ಅಡಿ ಅಗಲವಾಗದೆ. ಕಪುಪ ನಿೋಲ್ಲಛಾಯಯುಳ್ಳ ಕಲಿನ್ನನ ಬಳ್ಸಲಾಗದೆ. ಈ ವಿೋರಗಲಿ್ಲನಲಿ್ಲ ವಿೋರನ್ನ

Page 9: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 9

Volume- 2 Issue-2 May-August : 2019

ISSN: 2581-8511

ಕುದುರೆಯ ಮೇಲೆ ಆಸಿೋನ ಭಂಗಯಲಿ್ಲ ಕುಳತಿದುದ ಎಡಗೈಯಲಿ್ಲ ಕುದುರೆಯ ಲಗ್ರಮನ್ನನ ಬಲಗೈಯಲಿ್ಲ ತನನ

ಸೊಂಟ್ದಲಿ್ಲ ಸಿಕಿಕ ಸಿಕೊೊಂಡಿರುವ ಖ್ಡೆವನ್ನನ ಹಿಡಿದು ವಿೋರ ಹಿೊಂದಕೆಕ ತಿರುಗ ನೋಡುತಿು ರುವಂತ್ರ ಚತಿಾ ಸಲಾಗದೆ.

ವಿೋರನ್ನ ಕೈಕಡಗ, ಕಾಲ್ಲನ ಕಡಗಳ್ನ್ನನ ಧರಿಸಿದ್ಯದ ನೆ. ಕೊರಳಗೆ ಕಂಠಾಭರಣ್, ಶಿರಾಸು ರಣ್ ಧರಿಸಿ

ಸಮರೊೋಚತವಾದ ಉಡುಪ್ನ್ನನ ಧರಿಸಿದ್ಯದ ನೆ. ವಿೋರನ್ನ ಕುಳತಿರುವ ಕುದುರೆ ತನನ ಮುೊಂದಿನ ಎರಡು

ಕಾಲ್ಲಗಳ್ನ್ನನ ಮೇಲೆತಿು ನೆಗೆಯುತಿು ರುವಂತ್ರ ಚತಿಾ ಸಲಾಗದೆ. ವಿೋರಗಲಿ್ಲನ ಬಲಭಾಗದಲಿ್ಲ ನಿೊಂತ ಭಂಗಯಲಿ್ಲ

ಒೊಂದು ವಿೋರನ ಚತಾ ವಿದುದ ಕೈ ಕಡಗ ತೊೋಳುಬಂರ್ಧ, ಶಿರಾಸು ರಣ್, ಕಂಠಾಭರಣ್, ಧರಿಸಿ ಸಮರೊೋಚತವಾದ

ಉಡುಪು ಧರಿಸಿ ಬಲಗೈಯಲಿ್ಲ ಕತಿು ಇಡಿದಿರುವಂತ್ರ ಚತಿಾ ಸಲಾಗದೆ. ಇದು ವಿನಾಶ್ದ ಅೊಂಚನಲಿ್ಲದೆ. ಇತಿು ೋಚೆಗೆ

ನಿರ್ಧಗಳ್ಳ ರು ಈ ವಿೋರಗಲಿ್ಲನ ಅಡಿಯಲಿ್ಲ ನಿರ್ಧ ಇದೆ ಎೊಂದು ಇದನ್ನನ ಕಿತ್ತು ಹಾಕಿದ್ಯದ ರೆ ಮತ್ರು ಅದೇ ಜರ್ಮೋನಿನವರು

ರಕ್ಷಣೆಯನ್ನನ ಮಾಡಿದ್ಯದ ರೆ.

ಮ್ಹಾಸ್ತಿಕಲ್ಲು

ಗ್ರಾ ಮದಲಿ್ಲ ಕಂಡುಬರುವ ಪ್ರಾ ಚ್ಚಾ ವಶೇಷ್ಗಳ್ಲಿ್ಲ ಮಹಾಸತಿಕಲಿ್ಲ ಒೊಂದ್ಯಗದುದ ವಿೋರಗಲಿ್ಲನಷ್ಟ ೋ

ಮಹತವ ವನ್ನನ ಪ್ಡೆದುಕೊೊಂಡಿದೆ. ಆತಮ ಬಲ್ಲದ್ಯನದ ನೆನಪಿಗ್ರಗ ಹಾಕಿಸಿರುವ ಸಮ ರಕ ಶಿಲಪ ವಾಗದೆ.

ಅಮಮ ನಘಟ್ಟ ದಿೊಂದ ತಿಪೂಪ ರಿಗೆ ಹೋಗುವ ಮಾಗಿದಲಿ್ಲ ರಾಮಪ್ಪ ನ ಓಣಿ ಎೊಂದು ಕರೆಯಲಾಗುವ ಪ್ಾ ದೇಶ್ದಲಿ್ಲ

ಈ ಮಹಾಸತಿಕಲಿ್ಲದೆ. ಇದರ ಬಗೆೆ ಜನತ್ರಯಲಿ್ಲ ಗೌರವ ಯುತ ಭಾವನೆಯದೆ. ಇದನ್ನನ ಉತು ರಕೆಕ ಮುಖ್ಮಾಡಿ

ನಿಲಿ್ಲಸಲಾಗದೆ. ಭೂರ್ಮಯ ಮೇಲಾಾ ಗದಿೊಂದ ಸ್ತಮಾರು ಎರಡು ಅಡಿ ಎತು ರವಾಗದುದ 11/4 ಅಡಿ ಅಗಲವಾಗದೆ.

ಆತಮ ಬಲ್ಲಯಾಗರುವ ಸಿು ರೋ ರವಿಕೆ ಮತ್ತು ಲಂಗವನ್ನನ ವಸು ರಗಳಾಗ ಧರಿಸಿದ್ಯದ ಳೆ. ತನನ ಕೈಗಳ್ನ್ನನ ಮೇಲೆತಿು ಎರಡು

ಕೈಗಳ್ ಹಸು ಗಳ್ನ್ನನ ಜೊೋಡಿಸಿ ನಮಸಕ ರಿಸಿರುವ ರಿೋತಿಯಲಿ್ಲದೆ. ಎರಡು ಕೈಗಳ್ಲಿ್ಲ ಕಡಗಗಳವೆ. ತ್ತರುಬನ್ನನ

ಗುೊಂಡಾಕಾರವಾಗ ಕಟ್ಟಟ ದ್ಯದ ಳೆ. ಈ ಗ್ರಾ ಮದ ಕೊೋಲಾಕ ರ ಮನೆತನದಲಿ್ಲ ಯಾವುದೇ ಹೆಣಿ್ಣ ಮಕಕ ಳ್

ಮದುವೆಯಾದರೂ ವಿವಾಹಕೆಕ ತಂದ ಬಟ್ಟಟ ಮತ್ತು ಆಭರಣ್ಗಳ್ನ್ನನ ಈ ಮಹಾಸತಿಕಲಿ್ಲನ ಬಳ ಇಟ್ಟಟ ಮೊದಲ್ಲ

ಪೂಜೆ ಮಾಡಿದ ನಂತರದಲಿ್ಲ ಬಳ್ಸ್ತತಾು ರೆ.

ಈ ಗ್ರಾ ಮದ ಕೊೋಲಾಕ ರ ಮನೆತನಕೆಕ ಸೇರಿದ ಜನರು ಯಾವುದೇ ಊರಿನಲಿ್ಲದದ ರೂ ಇಲಿ್ಲಗೆ ಬಂದು ಪೂಜೆ

ಮಾಡಿಕೊೊಂಡು ಹೋಗುತಾು ರೆ. ಓಣಿ ತಿಮಮ ವವ ಎೊಂಬ ಹೆಸರಿಸಲಾಗದೆ. ಆತಮ ಬಲ್ಲಯಾದ ಹೆಣಿ್ಣ ಮಗಳು ನಿಮಮ

ಗಂಡುಗ್ರಳಯಾಗಲ್ಲೋ, ಹೆಣಿ್ಣ ಮಣಿ್ಣ ಗಲ್ಲೋ ಎೊಂದು ಶಾಪ್ ಇಟ್ಟ ಳೆೊಂಬ ನಂಬ್ಬಕೆಯದೆ.

ಲಾಂಗುಮುದ್ರರ ಕಲ್ಲು

ಇದೇ ಗ್ರಾ ಮದ ಎ.ಎಲ್.ನಟ್ರಾಜು s/o ಲಕಿಷ ಮ ೋನರಸಿೊಂಹಯಾ ಎೊಂಬುವರ ಜರ್ಮೋನಿನಲಿ್ಲ ಸ್ತಮಾರು 4 ಅಡಿ

ಉದದ ದ ಲ್ಲೊಂಗುಮುದೆಾ ಕಲಿ್ಲ ದೊರೆತಿದುದ , ಅದನ್ನನ ಅವರು ಪ್ಾ ತ್ರಾ ೋಕವಾಗ ಬೇರೆ ಕಡೆ ಪ್ಾ ತಿಷಿ್ಠಪಿಸಿದ್ಯದ ರೆ.

ಭೂರ್ಮಯ ಮೇಲೆ ಸ್ತಮಾರು 11/2 ಅಡಿ ಉದದ ವಾಗದುದ ಅದರ ಮೇಲೆ ಲ್ಲೊಂಗುವನ್ನನ ಕೆತು ಲಾಗದೆ. ಪ್ಾ ತಿವಷ್ಿ

ಮಹಾಶಿವರಾತಿಾ ಯಂದು ವಿಶೇಷ್ ಪೂಜೆ, ಅಭಿಷೇಕ ನೆರವೇರಿಸ್ತತಾು ರೆ.

ಕರವುಗಲ್ಲು ಗಳು

ಈ ಗ್ರಾ ಮದಲಿ್ಲ ಕಂಡುಬರುವ ಪ್ರಾ ಚ್ಚಾ ವಶೇಷ್ಗಳ್ಲಿ್ಲ ಕರವುಗಲಿ್ಲ ಗಳು ಕೂಡ ಈ ಊರಿನ ಸಂಸಕ ೃತಿಯ

ಪ್ಾ ತಿೋಕವಾಗವೆ. ಈ ಊರಿನಲಿ್ಲ 7 ಕರವುಗಲಿ್ಲ ಗಳದುದ ಇವುಗಳ್ಲಿ್ಲ ಮೂರು ಎತು ರವಾಗದುದ ಉಳದ

ನಾಲ್ಲಕ ಕಲಿ್ಲ ಗಳು ಚಕಕ ದ್ಯಗವೆ. ವಷ್ಿಕೊಕ ಮೆಮ ನಡೆಯುವ ಕಾರಬಿ ದ ದಿನದಂದು ಆ ವಷ್ಿದಲಿ್ಲ ಯಾರ

ತಳ್ವಾರಿಕೆ ಇರುತು ದೆಯೋ ಅವರು ಕೊೋಲಾಕ ರನ ಸಹಾಯದೊೊಂದಿಗೆ ಎಲಿಾ ಕರವುಗಲಿ್ಲ ಗಳಗೂ ಕೆಮಮ ಣಿ್ಣ

Page 10: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 10

Volume- 2 Issue-2 May-August : 2019

ISSN: 2581-8511

ಮತ್ತು ಸ್ತಣಿ್ ವನ್ನನ ನಿೋರಿನಲಿ್ಲ ಬರೆಸಿ ಅದ ಮಾಡಿಕೊೊಂಡು ಕೆಮಮ ಣಿ್ಣ ಮತ್ತು ಸ್ತಣಿ್ ದ ಪ್ಟ್ಟಟ ಯನ್ನನ ಹಾಕುತಾು ರೆ.

ಕಾರ ಹಬಿ ದಲಿ್ಲ ಈ ಕರವುಗಲಿ್ಲ ಗಳಗೆ ವಿಶೇಷ್ ಪೂಜೆ ಸಲಿ್ಲಸ್ತತಾು ರೆ.

ಊರಿನ ಪ್ಟೇಲರ ಮನೆಗೆ ವಿೋರಭದಾ ಸವ ರ್ಮ ದೇವಾಲಯದಿೊಂದ ನಗ್ರರಿ, ವಾದಾ , ಪ್ತ್ತು , ಕಹಳೆ,

ಮುೊಂತಾದವುಗಳೊಂದಿಗೆ ಊರಿನ ಪ್ಾ ಮುಖ್ರೊಡಗೂಡಿ ಹೋಗ ಕರವುಗಲಿ್ಲ ಗಳಗೆ ಎಡೆಯನ್ನನ ತರುತಾು ರೆ.

ಹಣಿ್ಣ , ಕಾಯ, ಪೂಜಾ ಸಮಗಾ (ಕಿಚ್ಚಡಿ, ಹಲಸಿನಹಣಿ್ಣ ವಿಶೇಷ್ವಾಗರುತು ದೆ) ಮುೊಂದೆ ತಳ್ವಾರ ಕಾಯ

ಮೊಟ್ಟಟ ಯಲಿ್ಲ ಕೆೊಂಡವನ್ನನ ತರುತಾು ರೆ. ವಿೋರಭದಾ ಸವ ರ್ಮ ದೇವಾಲಯದ ಬಲಭಾಗದಲಿ್ಲ ಇರುವ ಕರವುಗಲಿ್ಲಗೆ

ಪೂಜೆ ಮಾಡಿದ ನಂತರ ಊರ ಮುೊಂಭಾಗದಲಿ್ಲರುವ ಕರವುಗಲಿ್ಲಗೆ ಎಡೆಯನ್ನನ ಇಟ್ಟಟ ಪೂಜೆ ಸಲಿ್ಲಸಲಾಗುತು ದೆ.

ಆ ಎಡೆಯನ್ನನ ತಳ್ವಾರನಿಗೆ ನಿೋಡಲಾಗುತು ದೆ. ಇತಿು ೋಚೆಗೆ ಊರ ಮುೊಂಭಾಗದಲಿ್ಲರುವ ಎರಡು ಮತ್ತು

ವಿೋರಭದಾ ಸವ ರ್ಮ ದೇವಾಲಯದ ಬಳ ಇರುವ ಕರವುಗಲಿ್ಲಗೆ ಹಾಳಾಗದಂತ್ರ ಕಟ್ಟಟ ಯನ್ನನ ಕಟ್ಟ ಲಾಗದೆ.

ವಾ ವಸಯ ಸೇವಾ ಸಹಕಾರ ಬಾಾ ೊಂಕ್ನ ಕಟ್ಟ ಡದ ಒಳ್ಗೆ ಒೊಂದು ಕರವುಗಲಿ್ಲದುದ ಕಛೇರಿ ತ್ರರೆದಿರುವ ದಿನದಂದು

ಪ್ಾ ತಿನಿತಾ ಪೂಜೆ ಮಾಡುತಾು ರೆ.

ಕರವುಗಲ್ಲು ಇರುವ ಸ್ಥ ಳ

1ನೇ ಕರವುಗಲಿ್ಲ - ವಿೋರಭದಾ ಸವ ರ್ಮ ದೇವಾಲಯದ ಬಲಭಾಗ, ಗಾ ೊಂಥಾಲಯದ ಪ್ಕಕ ದಲಿ್ಲದೆ.

2ನೇ ಕರವುಗಲಿ್ಲ - ವಾ ವಸಯ ಸೇವಾ ಸಹಕಾರ ಬಾಾ ೊಂಕ್ ಕಟ್ಟ ಡದ ಒಳ್ಭಾಗ.

3ನೇ ಕರವುಗಲಿ್ಲ - ಕಲಮ ನೆ ಶಿವಣಿ್ ನವರ ಪ್ಾ ಕಾರ ಗೋಡೆಯ ಬಳ.

4 ಮತ್ತು 5ನೇ ಕರವುಗಲಿ್ಲ ಗಳು - ಶಿವಣಿ್ ನವರ ಮನೆಯ ಪ್ಾ ಕಾರ ಗೋಡೆ ಮತ್ತು ರಂಗನಾಥಸವ ರ್ಮ ದೇವಾಲಯದ

ಮಧ್ಯಾ ಇರುವ ರಸ್ಥು ಯಲಿ್ಲ

6ನೇ ಕರವುಗಲಿ್ಲ - ರಂಗನಾಥಸವ ರ್ಮ ದೇವಾಲಯದ ದಕಿಷ ಣ್ ಭಾಗದಲಿ್ಲ .

7ನೇ ಕರವುಗಲಿ್ಲ - ಗುಬಿ್ಬ ಗೆ ಹೋಗುವ ರಸ್ಥು ಬದಿಯಲಿ್ಲ ಕೆರೆಯ ಮುೊಂಭಾಗದಲಿ್ಲ ಕಂಡುಬರುತು ವೆ.

ಪ್ರರ ಚೀನ ಬಾವಿಗಳು

ಗ್ರಾ ಮದಲಿ್ಲ 3 ಪ್ರಾ ಚೋನ ಕಲಿ್ಲನ ಭಾವಿಗಳವೆ. ಮಹಾಲ್ಲೊಂಗೇಶ್ವ ರ ದೇವಾಲಯದ ಮುೊಂದೆ ಒೊಂದು ಮಜಾ ನ

ಭಾವಿಯದುದ ದೇವಾಲಯದ ಪೂಜಾ ಕೈೊಂಕಯಿಗಳ್ಗೆ ಆ ಭಾವಿಯ ನಿೋರನ್ನನ ಬಳ್ಸ್ತತಿು ದದ ರು. ಆದರೆ ಇತಿು ೋಚೆಗೆ

ನಿೋರಿಲಿದೆ ಒಣ್ಗ ಹೋಗದೆ. ಊರಿನ ಮುೊಂದಿನ ಕೆರೆಯ ಮುೊಂಭಾಗದಲಿ್ಲ ಈಗನ ಗ್ರಾ ಮಪಂಚ್ಚಯು ಯ

ಸರ್ಮೋಪ್ದಲಿ್ಲದೆ. ಇದನ್ನನ ಹಿೊಂದೆ ಹರಿಜನರ ಕುಡಿಯುವ ನಿೋರಿಗ್ರಗ ಬಳ್ಸಲಾಗುತಿು ತ್ತು . ಆದರೆ ಇತಿು ೋಚೆಗೆ ನಿೋರಿಲಿದೆ

ಒಣ್ಗ ಹೋಗದೆ. ಅವರಿಗೆ ಸಕಾಿರದ ವತಿಯೊಂದ ಕೊಳಾಯ ಸಂಪ್ಕಿದ ಮೂಲಕ ಕುಡಿಯುವ ನಿೋರಿನ ವಾ ವಸ್ಥಥ

ಮಾಡಲಾಗದೆ. ಮತೊು ೊಂದು ಸ್ಥಕಾ ಟ್ರಿ ಸಿದಧ ರಾಮಯಾ ನವರ ಮನೆ ಬಳಯದುದ ಅದನ್ನನ ಇತಿು ೋಚೆಗೆ

ಮುಚಿಲಾಗದೆ.

ಸಮಾಜಿಕ ಸ್ಥ ತಿಗತಿಗಳು

ಸಮಾಜಿಕ ವಾ ವಸ್ಥಥ ಸಮಾಜಿಕ ಸಂಸ್ಥಥ ಗಳೆೊಂಬ ಚಕಾ ದ ಮೇಲೆ ಬರುತಿು ರುವ ಗ್ರಡಿಯದದ ೊಂತ್ರ ಆತಿಮ ೋಯ

ಒಡನಾಟ್, ಸಮಾಜಿಕ ಸಂಬಂಧದ ಮೂಲಕ ನಮಮ ಸಂಸಕ ೃತಿಯನ್ನನ ರಕಿಷ ಸಿ ಪೋಷ್ಠಸಿ ಸಂಪ್ದಾ ರಿತ

ಸಂಸಕ ೃತಿಯ ತವರೂರನಾನ ಗಸಿದ ಕಿೋತಿಿ ಈ ಊರಿನ ಜನರಿಗೆ ಸಲಿ್ಲತು ದೆ. ಈ ಗ್ರಾ ಮದಲಿ್ಲ ವಿೋರಶೈವ

Page 11: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 11

Volume- 2 Issue-2 May-August : 2019

ISSN: 2581-8511

ಲ್ಲೊಂಗ್ರಯತರು ಹೆಚಿ ನ ಸಂಖೆಾ ಯಲಿ್ಲದುದ ದೊಡಡ ಸಮುದ್ಯಯವಾಗದೆ. ಬಾಾ ಹಮ ಣ್ರು, ನಾಯಕ, ತಿಗಳ್,

ಉಪ್ರಪ ರ, ಶ್ಟ್ಟಟ , ವೈಷ್ಿ ವ, ಭೋವಿ, ಮಾದಿಗ, ಒಲೆಯ, ತರ್ಮಳಯನ್ ಸಮುದ್ಯಯದವರಿದ್ಯದ ರೆ. ಇದೇ ಅಲಿದೆ

ವೃತಿು ಆಧಾರಿತ ಜಾತಿಗಳಾದ ಮಡಿವಾಳ್, ಕ್ಷಷ ರಿಕ, ಕಮಾಮ ರರಿದುದ ಇವರು ಇೊಂದಿಗೂ ತಮಮ ವೃತಿು ಯನ್ನನ

ಮುೊಂದುವರಿಸಿಕೊೊಂಡು ಬರುತಿು ದ್ಯದ ರೆ. ಈ ಸಮಾಜ ಪುರುಷ್ ಪ್ಾ ಧಾನವಾದ ಸಮಾಜವಾಗದುದ ಈ ಗ್ರಾ ಮದಲಿ್ಲ

ಬಹುಪ್ರಲ್ಲ ವಿಭಕು ಕುಟ್ಟೊಂಬಗಳೇ ಇವೆ. ಒೊಂದು ಅವಿಭಕು ಕುಟ್ಟೊಂಬವಿದುದ ಸ್ತಮಾರು 60ಮಂದಿ

ವಾಸಮಾಡುತಿು ದ್ಯದ ರೆ. ಇಲಿ್ಲನ ಸಮಾಜದಲಿ್ಲ ಮಕಕ ಳ್ ವಿವಾಹಕೆಕ ಸಂಬಂರ್ಧಸಿದಂತ್ರ ಕುಟ್ಟೊಂಬದ ಘನತ್ರ

ಗೌರವಗಳಗೆ ಅನ್ನಗುಣ್ವಾಗ ಜಾತಿ, ಉಪ್ಜಾತಿ, ಕುಲ, ಗೋತಾ ಗಳ್ ನಡುವೆ ಗಮನ ಹರಿಸಿ ವಿವಾಹ ಕಾಯಿ

ನೆರವೇರಿಸ್ತತಾು ರೆ. ಇತಿು ೋಚೆಗೆ ಜಾತಿಪ್ದಧ ತಿಯ ಕಠಿಣ್ ನಿೋತಿ ನಿಯಮಗಳು ಮತ್ತು ವಿವಾಹದ ಸಂದಭಿದಲಿ್ಲ

ನಡೆಯುತಿು ದದ ಸೊಂಪ್ಾ ದ್ಯಯಕ ವಿರ್ಧ ವಿಧಾನಗಳು ಕಡಿಮೆಯಾಗವೆ.

ಈ ಗ್ರಾ ಮದಲಿ್ಲ ವಿಭಿನನ ಜನ ಸಮುದ್ಯಯಗಳು ಇರುವುದರಿೊಂದ ಸಸಾ ಹಾರಿಗಳು ಮತ್ತು

ಮಾೊಂಸಹಾರಿಗಳದ್ಯದ ರೆ. ಉಡುಪುಗಳ್ನ್ನನ ಧರಿಸ್ತವುದು ಸಮಾನಾ ಸಂಗತಿಯಾದರೂ ಬೇರೆ ಬೇರೆ

ಸಂದಭಿಗಳ್ಲಿ್ಲ ಧರಿಸ್ತವಂತಹ ಉಡುಪುಗಳು ಕಣಿಿ ಗೆ ಕಟ್ಟಟ ವಂತಿರುತು ವೆ. ಸಂಪ್ತಿು ನ ಸವ ಲಪ ಭಾಗವನ್ನನ ಸ್ತಖ್

ಸಂತೊೋಷ್ ಮನರಂಜನೆಗೆ ವಿನಿಯೋಗಸ್ತತಾು ರೆ. ಈ ಗ್ರಾ ಮದ ಜನರು ತಮಮ ತಮಮ ವಯಸಿಸ ಗೆ ಅನ್ನಗುಣ್ವಾಗ

ಉಡುಪುಗಳ್ನ್ನನ ಧರಿಸ್ತತಾು ರೆ. ಸಿು ರೋ ಪುರುಷ್ರಿಬಿರೂ ಆಭರಣ್ಪಿಾ ಯರಾಗದುದ ಇವರು ತೊಡುವ ಆಭರಣ್ಗಳು ಈ

ಪ್ಾ ದೇಶ್ದ ಕಲಾತಮ ಕತ್ರಯನ್ನನ ವಾ ಕು ಪ್ಡಿಸ್ತವುದರ ಜೊತ್ರಗೆ ಸಂಪ್ಾ ದ್ಯಯ ಶಿಾ ೋಮಂತಿಕೆಗೂ ಕನನ ಡಿ ಹಿಡಿದಂತಿದೆ.

ಎಷ್ಟ ೋ ಬಡತನವಿದದ ರೂ ಮದುವೆ ಸಂದಭಿಕೆಕ ಕಡಾಡ ಯವಾಗ ಆಭರಣ್ ಮಾಡಿಸ್ತತಾು ರೆ.

ಈ ಸಮಾಜದಲಿ್ಲ ಸಿು ರೋಯರು ಗೌರವಯುತವಾದ ಸಥ ನವನ್ನನ ಪ್ಡೆದಿದುದ ಪುರುಷ್ರಂತ್ರಯೇ ಎಲಿಾ

ಕೆಷ ೋತಾ ಗಳ್ಲಿ್ಲ ಸಮಾನ ಸಥ ನಮಾನ ಪ್ಡೆದಿದ್ಯದ ರೆ. ಏಕಪ್ತಿನ ತವ ವಾ ವಸ್ಥಥ ಯದುದ ಗಂಡ ಸತು ವಿಧವೆ ಇನನ ೊಂದು

ಮದುವೆಗೆ ಒಪ್ಪ ದೆ ಏಕಾೊಂತವಾಗ ಜಿೋವನ ಸಗಸ್ತತಿು ದ್ಯದ ರೆ. ಇಲಿ್ಲನ ಮಹಿಳೆಯರು ಧಾರ್ಮಿಕ, ಆರ್ಥಿಕ, ಶೈಕ್ಷಣಿಕ,

ಸಮಾಜಿಕ ಕೆಷ ೋತಾ ಗಳ್ಲಿ್ಲ ಮುೊಂಚೂಣಿಯಲಿ್ಲದ್ಯದ ರೆ. ಮಹಿಳೆಯರು ಎೊಂ.ಎ, ಇೊಂಜಿನಿಯರಿೊಂಗ್, ಸಿ.ಎ., ಮುೊಂತಾದ

ವೃತಿು ಆಧಾರಿತ ಕೊೋಸ್ಿಗಳ್ಲಿ್ಲ ವಿದ್ಯಾ ಭಾಾ ಸ ಮಾಡುತಿು ದ್ಯದ ರೆ. ಶಿಕ್ಷಣ್ ಪ್ಡೆದ ಕೆಲವು ಸಿು ರೋಯರು ಸಕಾಿರಿ

ಉದೊಾ ೋಗದಲಿೂ ಸೇವೆಸಲಿ್ಲಸ್ತತಿು ದ್ಯದ ರೆ. ಶಿವರತನ ಎೊಂಬುವವರು ತ್ತಮಕೂರು ಜಿಲಿಾ ರೈತ ಸಂಘದ ಮಹಿಳಾ

ಅಧಾ ಕ್ಷರಾಗ ಕಾಯಿನಿವಿಹಿಸ್ತತಿು ದ್ಯದ ರೆ.

ಆಯಗ್ರರಿಕ ವಯ ವಸ್ಥಥ

ಇದು ಪ್ರಾ ಚೋನ ಕೃಷ್ಠ ಸಮಾಜದ ಒೊಂದು ಅವಿಭಾಜಾ ಅೊಂಗವಾಗತ್ತು . ಕೃಷ್ಠಯನ್ನನ ಅವಲಂಬ್ಬಸಿರುವ ರೈತ

ಕುಟ್ಟೊಂಬಗಳು, ರೈತರನ್ನನ ಆಶ್ಾ ಯಸಿ ಬದುಕುವ ಕೈ ಕಸ್ತಬ್ಬನವರು ಕೈ ಕಸ್ತಬ್ಬನವರನ್ನನ ಆಶ್ಾ ಯಸಿ ಬದುಕುವ

ರೈತ ಕುಟ್ಟೊಂಬಗಳು ಅವರ ಕತಿವಾ ಪ್ಾ ಜೆಞ ಗೆ ಅನ್ನಗುಣ್ವಾಗ ಆಯ ಪ್ದಧ ತಿ ಪ್ಾ ಚಲ್ಲತದಲಿ್ಲದೆ. ಕೃಷ್ಠ ಕಾಯಿಗಳಗೆ

ಬೇಕಾದ ಸಲಕರಣೆಗಳ್ನ್ನನ ಒದಗಸ್ತವ ತಮಮ ಗ್ರಾ ಮಗಳ್ ರಕ್ಷಣೆಯಂತಹ ಮತ್ತು ದೇವರ ಕಾಯಿಗಳ್ಲಿ್ಲ ಪ್ತ್ತು

ಹಿಡಿಯುವವರಿಗೆ ಸತಾು ಗ ತಮಟ್ಟ ಬಡಿಯುವಂತಹ ಇತರೆ ಕೆಲಸಗಳಗೆ ವಷ್ಿಕೊಕ ಮೆಮ ರೈತರು ತಾವು

ಬಳೆದಿದದ ರಲಿ್ಲ ಧಾನಾ ರೂಪ್ದಲಿ್ಲ ಕೊಡುವ ಪ್ಾ ತಿಫಲಕೆಕ ಆಯಾ ಎನನ ಲಾಗುತು ದೆ. ಆಯಾ ಪ್ಡೆಯುವವರನ್ನನ

ಅಡದೆಯವರು ಎೊಂದು ಕರೆಯುತಾು ರೆ. ಈ ಗ್ರಾ ಮದ ಗೌಡ, ಪ್ಟೇಲ, ಶಾನ್ನಭೋಗ, ಪ್ಣ್ಗ್ರರ, ತಳ್ವಾರ, ತೊೋಟ್ಟ,

ನಿೋರಗಂಟ್ಟ, ಅಕಕ ಸಲ್ಲಗ, ಕಮಾಮ ರ, ಅಗಸ, ಕ್ಷಷ ರಿಕರು ಇದ್ಯದ ರೆ. ಗೌಡ, ಪ್ಟೇಲ ಆಡಳತ ವಾ ವಸ್ಥಥ ನಡೆಸ್ತವ

ಕತಿವಾ ಹೊಂದಿದ್ಯದ ರೆ. ಶಾನ್ನಭೋಗ ಇವರಿಗೆ ಸಹಾಯಕ ಕೆಲಸವನ್ನನ ನಿವಿಹಿಸ್ತತಾು ರೆ. ಗೌಡನ ಕೆಲಸದಲಿ್ಲ

ತಳ್ವಾರ ಮತ್ತು ಕೊೋಲಾಕ ರ ನೆರವಿಗೆ ಬರುತಾು ರೆ. ತಳ್ವಾರರು ಗ್ರಾ ಮಗಳ್ ರಕ್ಷಕರಾಗ ಗ್ರಾ ಮಸೇವೆಯೇ

ದೇಶ್ಸೇವೆಯೊಂದು ನಂಬ್ಬ ಪೋಲ್ಲಸರಂತ್ರ ಕಾಯಿನಿವಿಹಿಸ್ತತಾು ಬಂದಿದ್ಯದ ರೆ. ಆಧುನಿೋಕರಣ್ದಿೊಂದ ಆಡಳತ

Page 12: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 12

Volume- 2 Issue-2 May-August : 2019

ISSN: 2581-8511

ವಾ ವಸ್ಥಥ ಯಲಿ್ಲ ಬದಲಾವಣೆಯಾಗ ಗ್ರಾ ಮ ಪಂಚ್ಚಯು ಗಳು ಆಡಳತದ ಜವಬಾದ ರಿ ಹತಿು ವೆ. ಆದರೂ ಗೌಡ,

ಪ್ಟೇಲರ ಪ್ರತಾ ಪ್ಾ ಮುಖ್ವಾಗದೆ.

ಆಯಗ್ರರರ ಒೊಂದು ಭಾಗವಾದ ತಳ್ವಾರಿಕೆ ವಿಶಿಷ್ಟ ಸಥ ನಮಾನ ಪ್ಡೆದುಕೊೊಂಡಿದೆ. ವಿೋರಶೈವ ಲ್ಲೊಂಗ್ರಯತರು

ಬಹುಸಂಖಾಾ ತರಾಗದ್ಯದ ರೆ. 5 ತಳ್ವಾರ ಕುಟ್ಟೊಂಬಗಳು ಇವೆ. (ವೆೊಂಕಟ್ನಾಯಕ , ಗರಿನಾಯಕ , ಕೆೊಂಪ್ಯಾ

ಗೋವಿೊಂದಯಾ , ಭದಾ ನಾಯಕ) ತಳ್ವಾರರಿಗೆ ಗ್ರಾ ಮದ ಜನತ್ರ ಆಯವನ್ನನ ನಿೋಡುತಾು ರೆ. ಮತ್ತು ಸಕಾಿರ ಇವರಿಗೆ

ಜರ್ಮೋನನ್ನನ ಮಂಜೂರು ಮಾಡಿದೆ. ತಳ್ವಾರಿಕೆಯಲಿ್ಲ ಕೊೋಲನ್ನನ ವಂಶ್ಪ್ರರಂಪ್ರೆಯೊಂದ ಬಳ್ಸಿಕೊೊಂಡು

ಬಂದಿದ್ಯದ ರೆ. ಆ ಮನೆತನದ ಸರದಿ ಮುಗದ ನಂತರ ಮತೊು ೊಂದು ಮನೆತನಕೆಕ ಕೊಡುತಾು ರೆ. ಹಬಿ ಜಾತ್ರಾ ಗಳ್ಲಿ್ಲ

ಮನೆಮನೆಗಳಗೆ ವಿಷ್ಯ ಮುಟ್ಟಟ ಸ್ತವುದು, ಜಾತಾಾ ಖ್ಚಿಗೆ ಹಣ್ವನ್ನನ ವಸೂಲ್ಲ ಮಾಡುವುದು, ನಾಾ ಯ

ಪಂಚ್ಚಯು ಗಳದ್ಯದ ಗ ತಿಳಸ್ತವುದು, ಉನನ ತ ವಗಿದ ಮನೆಯಲಿ್ಲ ಯಾರಾದರೂ ಮರಣ್ ಹೊಂದಿದರೆ

ಅವರನ್ನನ ಭೂರ್ಮಯಲಿ್ಲ ಊಳ್ಲ್ಲ ತ್ರಗೆದುಕೊೊಂಡು ಹೋಗಲ್ಲ ಚಟ್ಟ ಕಟ್ಟಟ ವುದು, ಭೂರ್ಮಯಲಿ್ಲ ಮುಚಿ ದ

ನಂತರ ತಳ್ವಾರನಿಗೆ ಕಂಚ್ಚ ಅಥವಾ ಹಿತಾು ಳೆ ತಟ್ಟಟ ಯಲಿ್ಲ ಊಟ್ಕೆಕ ಇಟ್ಟಟ , ಆ ತಟ್ಟಟ ಅಥವಾ ಚಂಬನ್ನನ ಆತನಿಗೆ

ನಿೋಡುತಾು ರೆ. ಹಿೊಂದಿನಿೊಂದಲೂ ಗ್ರಾ ಮರಕ್ಷಣೆ ಮತ್ತು ಕಾವಲ್ಲಗ್ರರಿಕೆಯನ್ನನ ಮಾಡಿಕೊೊಂಡು ಬಂದವರಾಗದ್ಯದ ರೆ.

ಪ್ಣ್ಗ್ರರ ಊರಿನ ದೇವತಾ ಮತ್ತು ಧಾರ್ಮಿಕ ಕಾಯಿಗಳ್ಲಿ್ಲ ಭಾಗವಹಿಸ್ತತಾು ರೆ. ಊರಿನ ಯಾವುದೇ

ಮನೆಗೆ ದೇವರನ್ನನ ಕರೆತರುವಾಗ ಗೌಡ, ಪ್ಟೇಲರ ಜೊತ್ರಗೆ ಪ್ಣ್ಗ್ರರರ ಅನ್ನಮತಿ ಪ್ಡೆಯಬೇಕಾಗುತು ದೆ. ಬಡಿಗ

ಮತ್ತು ಕಮಾಮ ರರು ಕೃಷ್ಠ ಕೆಲಸಗಳಗೆ ಮುಖ್ಾ ವಾದ ಉಪ್ಕರಣ್ ಮಾಡಿಕೊಡುತಾು ರೆ. ಅಕಕ ಸಲ್ಲಗರು ಆಭರಣ್

ಮಾಡಿಕೊಡುತಿು ದದ ರು ಇತಿು ೋಚೆಗೆ ಅವರ ಕುಟ್ಟೊಂಬದವರು ಯಾರು ಇಲಿ . ಮಡಿವಾಳ್ರು ಜಾತ್ರಾ ಮತ್ತು ದೇವರ

ಉತಸ ವಗಳ್ಲಿ್ಲ ದೇವರನ್ನನ ಒತ್ತು ಹೋಗುವವರಿಗೆ ಬಟ್ಟಟ ಯನ್ನನ ಹಾಕುತಾು ರೆ. ಪ್ತ್ತು ಗಳ್ನ್ನನ ಹಿಡಿಯುವ

ಕೆಲಸವನ್ನನ ಮಾಡುತಾು ರೆ. ಇವರಿಗೆ ಸಕಾಿರ ಭೂರ್ಮಯನ್ನನ ನಿೋಡಿದೆ. ನಿೋಗಿೊಂಟ್ಟ ಊರಿನ ಆಯಗ್ರರರಲಿ್ಲ

ಪ್ಾ ಮುಖ್ ಪ್ರತಾ ವಹಿಸ್ತತಾು ರೆ. ಇವರು ಊರಿನ ಕೆರೆಗಳ್ ನಿವಿಹಣೆ ಮತ್ತು ತೂಬುಗಳ್ ನಿವಿಹಣೆ ಮಾಡುತಾು ರೆ.

ಕೆರೆಗಳು ತ್ತೊಂಬ್ಬದ್ಯಗ ಬೇಸಿಗೆ ಕಾಲದಲಿ್ಲ ತೂಬನ್ನನ ಎತ್ತು ವುದರ ಮೂಲಕ ನಿೋರನ್ನನ ಗದೆದ ಗಳಗೆ ಬ್ಬಡುವುದು

ಇವರ ಕೆಲಸವಾಗದೆ. ಇವರ ಕೆಲಸಕೆಕ ಪ್ಾ ತಿಯಾಗ ಕೆರೆಯ ಹಿೊಂದೆ ಏಳು ಹೆಜೆಾ ಇಡುವಷ್ಟಟ ಜಾಗದಲಿ್ಲ ಬಳೆಯುವ

ಬಳೆಯನ್ನನ ಅವನಿಗೆ ನಿೋಡುತಾು ರೆ. ಕೊೋಲಾಕ ರ ಮತ್ತು ತೊೋಟ್ಟ (ಹಲೆಯ ಮತ್ತು ಮಾದಿಗ) ತಳ್ವಾರನಿಗೆ

ಸಹಾಯಕರಾಗ ಕೆಲಸ ಮಾಡುತಾು ರೆ. ಈ ಊರಿನ ಕೆಲಸಗಳ್ಲಿ್ಲ ಸವ ಚಾ ತ್ರ ಕಾಪ್ರಡುತಾು ರೆ. ಜಾತ್ರಾ , ಕಾತಿೋಿಕಮಾಸ

ಪೂಜೆ, ಅಭಿಷೇಕ, ವಿಶೇಷ್ ಪೂಜೆ ಮುೊಂತಾದ ಸಂದಭಿದಲಿ್ಲ ವಾದಾ ಮತ್ತು ಕಹಳೆ ಊದುವ ಸೇವೆ ಮಾಡುತಾು ರೆ.

ಇವರಿಗೂ ಸಹ ಸಕಾಿರ ಉೊಂಬಳಯಾಗ ಜರ್ಮೋನನ್ನನ ನಿೋಡಿದೆ. ಕ್ಷಷ ರಿಕರು ಉನನ ತ ವಗಿದವರ ಮನೆಯ ಬಳ

ಹೋಗ ಕ್ಷಷ ರವನ್ನನ ಮಾಡುವ ಕೆಲಸವನ್ನನ ನಿವಿಹಿಸ್ತತಾು ರೆ. ಗೌಡ, ಪ್ಟೇಲ, ಶಾಾ ನ್ನಭೋಗ ಪ್ಣ್ಗ್ರರರನ್ನನ

ಹರತ್ತಪ್ಡಿಸಿ ಉಳದವರಿಗೆ ಅವರ ಕೆಲಸಕೆಕ ಪ್ಾ ತಿಫಲವಾಗ ವಷ್ಿದ ಕೊನೆಯಲಿ್ಲ ಸ್ತಗೆ ಕಾಲದಲಿ್ಲ ತಾವು

ಬಳೆದ ಬಳೆಯಲಿ್ಲ ಕಾಳು ಕಡಿಡ ನಿೋಡುತಾು ರೆ. ಆದರೆ ಇತಿು ೋಚೆಗೆ ಮಳೆ ಬಳೆ ಸರಿಯಾದ ಸಮಯಕೆಕ ಆಗದೇ

ಇರುವುದರಿೊಂದ ಕೆಲವರು ಹಣ್ವನ್ನನ ನಿೋಡುತಾು ರೆ. ಆಯಗ್ರರರು ಕಾ ಮ ತಪಿಪ ದರೆ ಬುದಿದ ಹೇಳುವುದು ಊರ

ಪ್ಾ ಮುಖ್ರಿಗೆ ಇರುತು ದೆ. ಆಯ ಕೊಡುವಲಿ್ಲ ಯಾರಾದರೂ ರ್ಮೋನಾಮೇಷ್ ಎಣಿಸಿದವರ ಮೇಲೆ ಕಾ ಮ ಕೈಗಳುಳ ವ

ಅರ್ಧಕಾರ ಊರ ಮುಖಂಡರಿಗದೆ. ಜಾಗತಿೋಕರಣ್ ಮತ್ತು ನಗರಿೋಕರಣ್ದ ಪ್ಾ ಭಾವದಿೊಂದ ಆಯಗ್ರರಿಕೆ ಸಂಸಕ ೃತಿ

ಗ್ರಾ ಮ ಸಮಾಜದಲಿ್ಲ ಕಣ್ಮ ರೆಯಾಗುತಿು ದದ ರೂ ಈ ಗ್ರಾ ಮದಲಿ್ಲ ಇೊಂದಿಗೂ ಆಯಗ್ರರಿಕೆ ಪ್ದಧ ತಿ ಜಿೋವಂತವಾಗದೆ.

ಪ್ಾ ಧಾನವಾದ ಸಮಾಜದಲಿ್ಲ ಆಯಗ್ರರ ಒಬಿ ಕೂಲ್ಲ ಕಾರ್ಮಿಕನಾಗ ಕಂಡುಬರುವುದಿಲಿ . ಆಯಗ್ರರರಿಗೆ ಹೆಚಿ್ಚ

ಧಾನ ನಿೋಡಿದಷ್ಟಟ ಭೂರ್ಮತಾಯ ಹೆಚಿ್ಚ ಬಳೆ ನಿೋಡುತಾು ಳೆ ಎೊಂಬ ನಂಬ್ಬಕೆಯದೆ.

Page 13: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 13

Volume- 2 Issue-2 May-August : 2019

ISSN: 2581-8511

ಆರ್ಥಣಕ ವಯ ವಸ್ಥಥ

ಈ ಗ್ರಾ ಮದ ಬಹುಪ್ರಲ್ಲ ಜನರು ಕೃಷ್ಠಯನೆನ ೋ ಅವಲಂಬ್ಬಸಿದ್ಯದ ರೆ. ಕೆರೆಗಳ್ ಆಶ್ಾ ಯದಲಿ್ಲ ಗದೆದ ಗಳವೆ.

ಮಳೆಯನೆನ ೋ ಅವಲಂಬ್ಬಸಿಕೊೊಂಡು ಕೃಷ್ಠ ಮಾಡುವ ಹಲ ಮತ್ತು ಬದದ ಲ್ಲ ಜರ್ಮನ್ನಗಳವೆ. ಇಲಿ್ಲನ ಭೂ ಪ್ಾ ದೇಶ್

ಕೆೊಂಪುಮಣಿ್ಣ ಮತ್ತು ಮರಳು ರ್ಮಶಿಾ ತ ಕಪುಪ ಮಣಿಿ ನಿೊಂದ ಕೂಡಿದುದ ತ್ರೊಂಗು, ಅಡಿಕೆ, ವಿೋಳೆದೆಲೆ ಬಳೆಯುತಾು ರೆ. ಈ

ಬಳೆಗಳು ಭಾವಿಗಳು ಮತ್ತು ಕೊಳ್ವೆ ಭಾವಿಗಳ್ನ್ನನ ಆಶ್ಾ ಯಸಿವೆ. ರಾಗ, ಜೊೋಳ್, ಸಜೆಾ , ತೊಗರಿ, ಅಲಸಂದೆ,

ನವಣೆ, ಹುರುಳ ಮುೊಂತಾದ ಬಳೆ ಬಳೆಯುತಾು ರೆ. ಇತಿು ೋಚೆಗೆ ಈ ಗ್ರಾ ಮದ ರೈತರು ಸವಯವ ಕೃಷ್ಠಯ ಕಡೆಗೆ

ಗಮನ ಅರಿಸ್ತತಿು ದ್ಯದ ರೆ. ಇದೇ ಊರಿನ ಎ.ಎಸ್.ಶಂಕರಪ್ಪ ಮತ್ತು ಎ.ಎಸ್.ಮಹೇಶ್ ಪ್ಾ ಮುಖ್ ಸವಯವ

ಕೃಷ್ಠಕರಾಗದುದ ಮೆಣ್ಸ್ತ, ಏಲಕಿಕ , ವೆನಿಲಾ, ಪ್ಪ್ರಪ ಯ, ಕೊೋಕಾ ಮುೊಂತಾದ ಬಳೆ ಬಳೆಯುತಾು ರೆ. ಮಹೇಶ್ರವರಿಗೆ

ಬಾಗಲಕೊೋಟ್ಟ ಕೃಷ್ಠ ವಿಶ್ವ ವಿದ್ಯಾ ಲಯ ಶ್ಾ ೋಷಿ್ ತೊೋಟ್ಗ್ರರಿಕಾ ಪ್ಾ ಶ್ಸಿು , ಭೂರ್ಮ ನೆಟ್ವಕ್ಿ ಬೊಂಗಳೂರು

ಇವರಿೊಂದ ಫೆಲೋಶಿಪ್ ಅವಾರ್ಡಿ, ಗುಬಿ್ಬ ತಾಲಿೂಕು ಕನನ ಡ ರಾಜೊಾ ೋತಸ ವ ಪ್ಾ ಶ್ಸಿು , ಕನಾಿಟ್ಕ ಸರ್ೋಿದಯ

ಮಂಡಳ ಪ್ಾ ಶ್ಸಿು , ಗುಬಿ್ಬ ಸಿರಿ, ಸೂಪ್ರ್ ಸಟ ರ್ ರೈತ ಪ್ಾ ಶ್ಸಿು ಗಳು ಸಂರ್ಧವೆ. ಕೃಷ್ಠ ಕಾಲೇಜುಗಳಗೆ ಸಂಪ್ನ್ಮಮ ಲ

ವಾ ಕಿು ಗಳಾಗ ಉಪ್ನಾಾ ಸ ನಿೋಡಿದ್ಯದ ರೆ ಮತ್ತು ತಮಮ ಜರ್ಮೋನಿನಲಿ್ಲ ಬೇರೆ ಬೇರೆ ವಿಶ್ವ ವಿದ್ಯಾ ಲಯಗಳ್

ವಿದ್ಯಾ ರ್ಥಿಗಳಗೆ ನೈಸಗಿಕ ಕೃಷ್ಠ ಬಗೆೆ ತರಭೇತಿ ನಿೋಡುತಿು ದ್ಯದ ರೆ. ಶಂಕರಪ್ಪ ನವರು ತಾಲೂಕಿನಲಿ್ಲ ವಿಶೇಷ್ವಾಗ

ಗುರುತಿಸಿಕೊೊಂಡಿದುದ ನಗರ ಪ್ಾ ದೇಶ್ಗಳ್ ಕಲಾಾ ಣ್ ಮಂಟ್ಪ್ಗಳ್ಲಿ್ಲನ ಊಟ್ದ ಎಲೆಯನ್ನನ ತಂದು ಬಾವಿಯಲಿ್ಲ

ಕೊಳೆಯಸಿ ಅದರ ನಿೋರನ್ನನ ಹನಿ ನಿೋರಾವರಿ ಮೂಲಕ ತೊೋಟ್ಗ್ರರಿಕೆಗೆ ಬಳ್ಸಿಕೊಳುಳ ತಿು ದ್ಯದ ರೆ. ಮಳೆ ನಿೋರು

ಕೊಯಿಗೂ ಹೆಸರುವಾಸಿಯಾಗದ್ಯದ ರೆ. ಇವರು ಸವಯವ ಕೃಷ್ಠಯ ಬಗೆೆ ಅನೇಕ ಉಪ್ನಾಾ ಸಗಳ್ನ್ನನ

ನಿೋಡಿದ್ಯದ ರೆ.

ಈ ಗ್ರಾ ಮದಲಿ್ಲ ನಗರ ಪ್ಾ ದೇಶ್ ಮತ್ತು ಇತರ ಗ್ರಾ ಮಗಳಗೆ ಸಂಚರಿಸಲ್ಲ ಉತು ಮವಾದ ಸರಿಗೆ

ಸಂಪ್ಕಿವಿದೆ. ಕೃಷ್ಠಯ ಜೊತ್ರಯಲಿೆೋ ಕೆಲವರು ಪ್ಶುಸಂಗೋಪ್ನೆಯನ್ನನ ಅವಲಂಬ್ಬಸಿದ್ಯದ ರೆ. ಕುರಿ, ಮೇಕೆ,

ಎತ್ತು , ಎಮೆಮ , ಕೊೋಣ್, ಹಸ್ತಗಳು ಮತ್ತು ಸಿೋಮೆ ಹಸ್ತಗಳ್ನ್ನನ ಸಕುತಿು ದ್ಯದ ರೆ.

ಸೊಂಪ್ಾ ದ್ಯಯಕ ಉದೊಾ ೋಗಗಳಾದ ಬಡಗಗಳು, ಗುಡಿಕಾರರು ಭಜಂತಿಾ ಗಳು, ಮಡಿವಾಳ್ರು ವೃತಿು ಯನ್ನನ

ಮುೊಂದುವರಿಸ್ತತಿು ದ್ಯದ ರೆ. ಆಧುನಿಕವಾಗ ಬಹುಪ್ರಲ್ಲ ಜನರು ಸವ ಯಂ ಉದೊಾ ೋಗಗಳ್ಲಿ್ಲ ತೊಡಗಕೊೊಂಡಿದ್ಯದ ರೆ.

ಬಟ್ಟಟ ಹಲ್ಲಯುವುದು. ತ್ರೊಂಗು, ಅಡಿಕೆ, ಮಾವು, ಹುಣ್ಸ್ಥ, ಅಡಿಕೆಪ್ಟ್ಟಟ , ಲೋಹದ ಪ್ರತ್ರಾ ವಾಾ ಪ್ರರ

ಮಾಡುವುದು, ದಿನಸಿ ಅೊಂಗಡಿ, ಸೈಕಲ್ರಿಪೇರಿ, ಎಲೆಕಿಟ ರಕ್ ಮೊೋಟ್ರ್ ವೈೊಂಡಿೊಂಗ್ ಮಾಡುವುದು, ಟ್ಟೋ

ಅೊಂಗಡಿಗಳ್ನ್ನನ ಇಟ್ಟಟ ಕೊೊಂಡು ಜಿೋವನ ನಡೆಸ್ತತಿು ದ್ಯದ ರೆ. ಕೆಲವರು ಷ್ಠರ್ಮಯಾನ, ಪಿ್ವರ್ ಡೆಕೊೋರೇಷ್ನ್,

ಕೊೋಳಫಾರಂ ನಡೆಸ್ತವುದು, ಟ್ಟೊಂಪೋ, ಆಟೋ, ಓಡಿಸ್ತವುದನ್ನನ ಉದೊಾ ೋಗವನಾನ ಗ ಮಾಡಿಕೊೊಂಡಿದ್ಯದ ರೆ.

ಖಾಸಗ ಕಂಪ್ನಿಗಳ್ಲಿ್ಲ , ಸಕಾಿರೇತರ ಸಂಘಸಂಸ್ಥಥ ಗಳ್ಲಿ್ಲ , ಅನ್ನದ್ಯನಿತ ಶಿಕ್ಷಣ್ ಸಂಸ್ಥಥ ಮತ್ತು ಅನ್ನದ್ಯನರಹಿತ

ಶಿಕ್ಷಣ್ ಸಂಸ್ಥಥ ಗಳ್ಲಿ್ಲ ಕೆಲಸ ನಿವಿಹಿಸ್ತವವರಿದ್ಯದ ರೆ. ಸವ ತಂತಾ ವಾಗ ನಾಾ ಯಾೊಂಗ ಇಲಾಖೆಯಲಿ್ಲ

ಕಾಯಿನಿಿಹಿಸ್ತವ ವಕಿೋಲರಿದ್ಯದ ರೆ. ರಕ್ಷಣ್ಣಇಲಾಖೆ, ಪೋಲ್ಲೋಸ್ಇಲಾಖೆ, ಕಂದ್ಯಯಇಲಾಖೆ,

ಭೂಮಪ್ರನಇಲಾಖೆ, ಶಿಕ್ಷಣ್ಇಲಾಖೆ, ಕಾಲೇಜುಶಿಕ್ಷಣ್ಇಲಾಖೆ, ಮುೊಂತಾದ ಸಕಾಿರಿ ಇಲಾಖೆಗಳ್ಲಿ್ಲ

ಕಾಯಿನಿವಿಹಿಸ್ತತಿು ರುವ ಸಕಾಿರಿ ನೌಕರರುಗಳದ್ಯದ ರೆ.

ಕೈಗ್ರರಿಕಗಳು

ಈ ಗ್ರಾ ಮದಲಿ್ಲ ಯಾವುದೇ ಬೃಹತ್ ಪ್ಾ ಮಾಣ್ದ ಕೈಗ್ರರಿಕೆಗಳು ಕಂಡುಬರುವುದಿಲಿ . ಸಣಿ್ ಕೈಗ್ರರಿಕೆಗಳು

ಕಂಡುಬರುತು ವೆ. ಪ್ಾ ಕೃತಿ ರಾಗಹಿಟ್ಟಟ ನ ಗರಣಿ ಇದುದ ಇಲಿ್ಲ ರಾಜಾ ಮತ್ತು ಅೊಂತರಾಜಾ ದಿೊಂದ ರಾಗ ಕೊೊಂಡು ತಂದು

ಹಿಟ್ಟ ನ್ನನ ಮಾಡಿ ನಗರ ಪ್ಾ ದೇಶ್ಗಳಗೆ ಸರಬರಾಜು ಮಾಡುತಾು ರೆ. ಉಳದಂತ್ರ ಮೂರು ಹಿಟ್ಟಟ ನ ಗರಣಿಗಳವೆ.

Page 14: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 14

Volume- 2 Issue-2 May-August : 2019

ISSN: 2581-8511

ಒೊಂದು ಅಡಿಕೆ ತಟ್ಟಟ ತಯಾರಿಕಾ ಕೈಗ್ರರಿಕೆಯದುದ ತಟ್ಟಟ ಗಳ್ನ್ನನ ತಯಾರಿಸಿ ನಗರ ಪ್ಾ ದೇಶ್ ಮತ್ತು ಅೊಂತರಾಜಾ ಕೆಕ

ಕಳುಹಿಸ್ತತಾು ರೆ. ತ್ರೊಂಗನಕಾಯ ಎಣಿೆ ಕೈಗ್ರರಿಕೆ, ಶುದಿಧ ೋಕರಿಸಿದ ಕುಡಿಯುವ ನಿೋರಿನ ಕೈಗ್ರರಿಕೆಯದುದ ನಗರ

ಪ್ಾ ದೇಶ್ದ ಅೊಂಗಡಿಗಳಗೆ ನಿೋರು ಸರಬರಾಜು ಮಾಡುತಾು ರೆ. ಪಿ್ ೈನಿೊಂಗ್ ರ್ಮಲ್ಗಳು ಕಂಡುಬರುತು ವೆ.

ಹರ್ಕಾಸು ವಯ ವಸ್ಥಥ

ರಾಷ್ಠಟ ರೋಯ ಬಾಾ ೊಂಕ್ ಆದ ಎಸ್.ಬ್ಬ.ಐನವರು ಈ ಗ್ರಾ ಮದಲಿ್ಲ ಉಚತವಾಗ ಖಾತ್ರಗಳ್ನ್ನನ ತ್ರರೆದು ನಿಗರ್ಧತ

ಪ್ಾ ಮಾಣ್ದ ಹಣ್ವನ್ನನ ಖಾತ್ರಗೆ ಸೇರಿಸ್ತವ ಮತ್ತು ಖಾತ್ರಯೊಂದ ತ್ರಗೆಯಲ್ಲ ಅವಕಾಶ್ ಕಲ್ಲಪ ಸಿದ್ಯದ ರೆ. ವಾ ವಸಯ

ಸೇವಾ ಸಹಕಾರ ಸಂಘದಲಿೂ ಬಾಾ ೊಂಕಿೊಂಗ್ ವಾ ವಸ್ಥಥ ಕಲ್ಲಪ ಸಲಾಗದೆ. ಇದರಲಿ್ಲ ರೈತರಿಗೆ ನಿಗರ್ಧತ ಪ್ಾ ಮಾಣ್ದಲಿ್ಲ

ಸಲಸೌಲಭಾ ವನ್ನನ ವಿತರಿಸಲಾಗುತು ದೆ. ಮಹಿಳೆ ಮತ್ತು ಮಕಕ ಳ್ ಕಲಾಾ ಣ್ಣಭಿವೃದಿಧ ಇಲಾಖೆಯಡಿಯಲಿ್ಲ ಸಿು ರೋ

ಶ್ಕಿು ಸಂಘಗಳು ರಚನೆಗೊಂಡಿದುದ ಸಂಘದ ಸದಸಾ ರುಗಳು ನಿಗರ್ಧತ ಪ್ಾ ಮಾಣ್ದಲಿ್ಲ ಹಣ್ವನ್ನನ ಉಳತಾಯ

ಮಾಡುತಿು ದ್ಯದ ರೆ. ಮತ್ತು ಸಂಘದ ಸದಸಾ ರುಗಳಗೆ ಉಳತಾಯದ ಹಣ್ದಲಿ್ಲ ಕಡಿಮೆ ಬಡಿಡ ಗೆ ನಿಗರ್ಧತ

ಪ್ಾ ಮಾಣ್ದಲಿ್ಲ ಸಲವನ್ನನ ನಿೋಡುತಾು ರೆ. ಇದೇ ಅಲಿದೆ ಧಮಿಸಥ ಳ್ ಗ್ರಾ ಮಾಭಿವೃದಿಧ ಸಂಘಗಳು, ಐ.ಡಿ.ಎಫ್,

ಗ್ರಾ ರ್ಮೋಣ್ ಕೂಟ್ಗಳು ಮುೊಂತಾದ ಸಂಘಗಳದುದ ಆ ಸಂಘಗಳ್ ಸದಸಾ ರು ಕಡಿಮೆ ಬಡಿಡ ಯಲಿ್ಲ ಹಣ್ವನ್ನನ

ತ್ರಗೆದುಕೊೊಂಡು ಆರ್ಥಿಕವಾಗ ಸದೃಢತ್ರಯತಾು ಹೆಜೆಾ ಇಡುತಿು ದ್ಯದ ರೆ.

ಸ್ಮುದಾಯ ಸೌಲಭಯ ಗಳು

ಅಮಮ ನಘಟ್ಟ ಗ್ರಾ ಮದಲಿ್ಲ ಗ್ರಾ ಮಪಂಚಯು ಯದುದ ಅದರ ಆಡಳತಕೆಕ ಒಳ್ಪ್ಟ್ಟಟ ದೆ. ಕೊಂದಾ ಸಕಾಿರದ

ಅರ್ಧೋನದಲಿ್ಲ ಕಾಯಿನಿವಿಹಿಸ್ತತಿು ರುವ ಅೊಂಚೆ ಇಲಾಖೆಯದೆ. ಇದರಲಿ್ಲ ಹಣ್ಕಟ್ಟ ಲ್ಲ, ತ್ರಗೆದುಕೊಳ್ಳ ಲ್ಲ,

ವಾ ವಸ್ಥಥ ಯದೆ. ಅೊಂಚೆ ಜಿೋವವಿಮೆ, ಆರ್.ಡಿ ಸ್ತಕನಾಾ ಸಮೃದಿಧ ಯೋಜನೆ ಮುೊಂತಾದ ಸೌಲಭಾ ಕಲ್ಲಪ ಸಲಾಗದೆ.

ಸಕಾಿರಿ ದೂರವಾಣಿ ಸಂಪ್ಕಿ ವಾ ವಸ್ಥಥ ಯನ್ನನ ಕಲ್ಲಪ ಸಲಾಗದೆ. ಗ್ರಾ ಮ ಸಮುದ್ಯಯದಲಿ್ಲ ಆದಾ ತಾ ಪ್ಡಿತರ

ಚೋಟ್ಟ ಇರುವವರಿಗೆ ಅನನ ಭಾಗಾ ಯೋಜನೆಯಡಿಯಲಿ್ಲ ಅಕಿಕ , ಸಿೋಮೆಎಣಿೆ , ಇತರೆ ಆಹಾರ ಪ್ದ್ಯಥಿ

ನಿೋಡಲಾಗುತಿು ದೆ. ಹಿರಿಯ ನಾಗರಿೋಕರಿಗೆ ಗುರುತಿನ ಚೋಟ್ಟ, ವೃದ್ಯಧ ಪ್ಾ ವೇತನ ವಿಧಾವ ವೇತನ, ಸಂಧಾಾ ಸ್ತರಕಾಷ

ವೇತನ, ವಿಕಲಚೇತನ ವೇತನ ಪ್ಡೆಯುತಿು ರುವ ಫಲಾನ್ನಭವಿಗಳದ್ಯದ ರೆ. ಬಸವಯೋಜನೆ, ಅೊಂಬೇಡಕ ರ್

ವಸತಿಯೋಜನೆ, ಇೊಂದಿರಾಗ್ರೊಂರ್ಧ ಆವಾಸ್ ಯೋಜನೆ ಮುೊಂತಾದ ಯೋಜನೆಗಳ್ಡಿಯಲಿ್ಲ ವಸತಿ ವಾ ವಸ್ಥಥ

ಕಲ್ಲಪ ಸಿದೆ. ಶುದಧ ಕುಡಿಯುವ ನಿೋರಿನ ಘಟ್ಕ ಸಥ ಪಿಸಲಾಗದೆ. ಪ್ಾ ತಿೋ ವಾರಕೊಕ ಮೆಮ ಆರೊೋಗಾ ಶುಶುಾ ಷ್ಕಿಯರು

ಗ್ರಾ ಮಕೆಕ ಭೇಟ್ಟ ನಿೋಡುತಾು ರೆ. ವಾ ವಸಯ ಸೇವಾ ಸಹಕಾರ ಸಂಘವಿದೆ.

ಪ್ರಾ ಥರ್ಮಕ ಪೂವಿ ಹಂತದ ಒೊಂದು ಅೊಂಗನವಾಡಿ ಕೊಂದಾ ವಿದೆ. 24 ಮಕಕ ಳು ಕಲ್ಲಕೆಯಲಿ್ಲ

ತೊಡಗಕೊೊಂಡಿದ್ಯದ ರೆ. ಒೊಂದರಿೊಂದ ಏಳ್ನೇ ತರಗತಿವರೆಗನ ಸಕಾಿರಿ ಹಿರಿಯ ಮಾಧಾ ರ್ಮಕ ಪ್ರಠಶಾಲೆಯದುದ

118 ಮಕಕ ಳು ಕನನ ಡ ಭಾಷ್ಠ ಮಾಧಾ ಮದಲಿ್ಲ ಉಚತ ಶಿಕ್ಷಣ್ ಪ್ಡೆಯುತಿು ದ್ಯದ ರೆ. ಶಾಲೆಯಲಿ್ಲ ಬ್ಬಸಿಯೂಟ್,

ಕಿಷ ೋರಭಾಗಾ , ಸಮವಸು ರ, ಉಚತ ಪ್ಠಾ ಪುಸು ಕ, ಶೌಚ್ಚಲಯ, ಸಮವಸು ರ, ಕುಡಿಯುವ ನಿೋರಿನ ವಾ ವಸ್ಥಥ ಕಲ್ಲಪ ಸಿದ್ಯದ ರೆ.

ಜಾನಪ್ದ್ ವೈಶ್ಷ್ಟಟ ಯ ತೆಗಳು

ಹಳೆಯ ತಲೆಮಾರಿನಿೊಂದ ಹಸ ತಲೆಮಾರಿಗೆ ತಿಳುವಳಕೆ, ಅನ್ನಭವ ಕಲೆ, ಹಬಿ , ಜಾತ್ರಾ , ಆಚರಣೆ,

ನಂಬ್ಬಕೆ, ಸಂಪ್ಾ ದ್ಯಯ, ನಡೆ, ನ್ನಡಿ ಮುೊಂತಾದ ಅೊಂಶ್ಗಳು ಆಧುನಿಕ ಸಮಾಜಕೆಕ ಅನ್ನಗುಣ್ವಾಗ

ಮುೊಂದುವರಿದು ಕೊೊಂಡು ಬರುತಿು ವೆ. ಪ್ಾ ಜಾಞ ಪೂವಿಕವಾಗ ಕಾಪ್ರಡಿಕೊೊಂಡು ಬಂದ ಮಾನವ ಜಿೋವನದ

ಸಂಸಕ ೃತಿಯ ಅವಿಭಾಜಾ ಅೊಂಶ್ಗಳಾಗವೆ. ಈ ಗ್ರಾ ಮದ ಜನರು ಮಕರ ಸಂಕಾಾ ೊಂತಿ ಶಿವರಾತಿಾ , ಯುಗ್ರದಿ,

ರಾಮನವರ್ಮ, ಬಸವ ಜಯಂತಿ, ಗೌರಿ, ಗಣೇಶ್ ಚತ್ತರ್ಥಿ, ನವರಾತಿಾ , ದಿೋಪ್ರವಳ ಹಬಿ ಗಳ್ನ್ನನ ಆಚರಿಸ್ತತಾು ರೆ. ಈ

Page 15: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 15

Volume- 2 Issue-2 May-August : 2019

ISSN: 2581-8511

ಗ್ರಾ ಮದಲಿ್ಲ ಜಾನಪ್ದ ಕಲಾವಿದರುಗಳದ್ಯದ ರೆ. ಕೊೊಂಬುಕಹಳೆ, ತಮಟ್ಟ, ನಗ್ರರಿ, ತಬಲ, ಹರೇವಾದನ,

ನಂದಿಧವ ಜಕುಣಿತ, ಕಲಾವಿದರುಗಳದ್ಯದ ರೆ. (ಪುಟ್ಟ ಯಾ , ಚಂದಾ ಯಾ ಬೋಜಯಾ , ಬಸವರಾಜು, ಈರದ್ಯಸಪ್ಪ ,

ಸಿದದ ರಾಮಯಾ ಮುೊಂತಾದವರು) ಬಾಯಬ್ಬಟ್ಟ ರೆ ಗ್ರದೆ ಮಾತ್ತ ಬರುವ ಗಂಗಮಮ ಶ್ಾ ೋಷಿ್ ಗ್ರದೆ ಮಾತಿನ

ಕಲಾವಿದರಿದ್ಯದ ರೆ.

ಈ ಗ್ರಾ ಮದ ಜನರು ಕೃಷ್ಠಯನೆನ ೋ ತನನ ಜಿೋವಂತ ಬದುಕನಾನ ಗಸಿಕೊೊಂಡಿರುವುದರಿೊಂದ ಕೃಷ್ಠಗೆ

ಸಂಬಂರ್ಧಸಿದ ಆಚರಣೆಗಳು ರೂಢಿಯಲಿ್ಲವೆ. ಹನಾನ ರು ಹೂಡುವುದು, ಬ್ಬತು ನೆ ಪೂಜೆ, ಕೊಯಲ್ಲ ಪೂಜೆ, ಕಣ್

ಮಾಡುವುದು. ರಾಶಿಪೂಜೆಯಂತಹ ಆಚರಣೆಗಳವೆ. ರಾಶಿ ಪೂಜೆ ಕೃಷ್ಠಯ ಕೊನೆಪೂಜೆಯಾಗದುದ ಈ

ಸಂದಭಿದಲಿ್ಲ ದಡಿಡ ಭತು ದ ಅಕಿಕ ಯನ್ನನ ನಿೋರಿನಲಿ್ಲ ನೆನಸಿ ಅದಕೆಕ ಕಾಯ ಬಲಿ ಹಾಕಿದ ಫಲಹಾರವನ್ನನ

ಎಡೆಮಾಡುತಾು ರೆ. ಕಣ್ದಲಿ್ಲ ಕೆಲಸ ಮಾಡಿದ ಮತ್ತು ಹತಿು ರದ ಕಣ್ದವರೆಗೆ ಇತರ ಜನರಿಗೆ ಫಲಹಾರವನ್ನನ

ಹಂಚ್ಚತಾು ರೆ. ರಾಶಿ ಪೂಜೆಯ ನಂತರ ಮನೆಗೆ ತರುವ ಮೊದಲ್ಲ ಕಣ್ದಲಿೆ ೋ ದ್ಯಸಪ್ಪ , ತಳ್ವಾರ, ತೊೋಟ್ಟ, ಭಜಂತಿಾ ,

ಮಡಿವಾಳ್ರಿಗೆ ಧಾನಾ ವನ್ನನ ಕೊಡುತಾು ರೆ.

ಈ ಊರಿನ ಜಾತ್ರಾ ಯು ಕವಲ ಧಾರ್ಮಿಕ ಮಹತವ ವಾಗಷ್ಟ ೋ ಉಳಯದೇ ಸಮಾಜಿಕ ಭಾವೈಕಾ ತ್ರಯ

ಸಂಕತವಾಗ ರೂಪುಗೊಂಡಿದೆ. ಸಂಸಕ ೃತಿಯ ಸಂಗಮವಾಗ ವಿವಿಧ ಕಲೆಗಳ್ ವಿಕಾಸಕೂಕ ಕಾರಣ್ವಾಗದೆ.

ಗ್ರಾ ಮದ ಎಲಿಾ ಕುಟ್ಟೊಂಬಗಳು ಸೇರಿ ಸವ ಣ್ಿ ಗೌರಮಮ ನವರ ಜಾತ್ರಾ ಯನ್ನನ ಮಾಡುತಾು ರೆ. ಇತಿು ೋಚೆಗೆ ಕೆೊಂಪ್ಮಮ ನ

ಜಾತ್ರಾ ಯನ್ನನ ಮಾಡುತಿು ದ್ಯದ ರೆ. ಪ್ಾ ತಿವಷ್ಿ ರಾಮನವರ್ಮಯಂದು ರಂಗನಾಥಸವ ರ್ಮಯ ಪ್ಲಿಕಿಕ ಉತಸ ವ

ನಡೆಯುತು ದೆ. ಪ್ಾ ತಿೋ ಅಮವಾಸ್ಥಾ ಯಂದು ವಿೋರಭದಾ ಸವ ರ್ಮಯ ಉತಸ ವ ಮತ್ತು ವಿಶೇಷ್ ಪೂಜೆ ಮತ್ತು

ಅಭಿಷೇಕಗಳು ನಡೆಯುತು ವೆ.

ಆಧುನಿಕ ಸಮಾಜದಲಿ್ಲ ನಂಬ್ಬಕೆಗಳು ತಮಮ ಜಿೋವಂತಿಕೆಯನ್ನನ ಕಳೆದುಕೊಳುಳ ತಿು ದದ ರೂ ಈ ಊರಿನ

ಜನಮನದಲಿ್ಲ ಇನ್ಮನ ಬೇರೂರಿವೆ. ಇವು ಮಾನವ ಜನಾೊಂಗದ ಸಂಸಕ ೃತಿಯ ಜಿೋವ ನಾಡಿಗಳಾಗವೆ. ವಿದ್ಯಾ ವಂತ

ಸಮಾಜ ಸಂಪ್ಾ ದ್ಯಯಗಳ್ನ್ನನ ಕಡೆಗಣಿಸಿದರೂ ಕೆಲರ್ಮೆಮ ಇವು ಜಿೋವನಕೆಕ ಅನಿವಾಯಿ ಎೊಂಬಂತ್ರ

ಅರಿವಿಲಿದಂತ್ರ ಸಮಾಜಿಕ ಬದುಕಿನಲಿ್ಲ ನ್ನಸ್ತಳಕೊಳುಳ ತು ವೆ.

ಮೊೋಡ ಕಟ್ಟಟ ದರೆ ಮಳೆ ಬರುತ್ರು .

ಪ್ಾ ಯಾಣ್ ಮಾಡುವಾಗ ನರಿ ಅಡಡ ಬಂದರೆ ಒಳೆಳ ಯದ್ಯಗುತ್ರು .

ಹನಾನ ರು ಹೂಡದೆ ಹಲ ಉಳುವಂತಿಲಿ .

ಒಳೆಳ ಕೆಲಸಕೆಕ ಹರಟ್ಟಗ ಬಳೆಮಾರುವವರು, ಮುತ್ರು ೈದೆ, ತ್ತೊಂಬ್ಬದ ಕೊಡ ಬಂದರೆ ಒಳೆಳ ಯದು.

ಗುದದ ಲ್ಲ ಹೆಗಲ ಮೇಲೆ ಒತು ವರು, ಸೌದೆ ಹರೆ ಹತು ವರು, ವಿಧವೆ, ಬಕುಕ , ಎದುರಿಗೆ ಬರಬಾರದು.

ರಾತಿಾ ವೇಳೆ ಕ್ಷಷ ರಿಕರನ್ನನ ನೆನೆಸಬಾರದು.

ಸಂಜೆವೇಳೆ ಮನೆ ಕಸ ಗುಡಿಸಿ ಹರಹಾಕಬಾರದು.

ರಾತಿಾ ಮಲಗ ಬಳಗೆೆ ಏಳುವಾಗ ದೇವರ ಪೋಟೋ ನೋಡಿ ಹೇಳ್ಬೇಕು.

ಮನೆ ಮುೊಂದೆ ಕಾಗೆ ಅರಚದರೆ ನಂಟ್ರು ಬರುತಾು ರೆ.

ಹಲಿ್ಲ ಲಚಗುಟ್ಟಟ ದರೆ ಅೊಂದುಕೊೊಂಡಿದುದ ಹಿಡೇರುತು ದೆ.

ರಾತಿಾ ವೇಳೆ ಗೂಬ ಕೂಗದರೆ ಯಾರೊೋ ಸಯುತಾು ರೆ.

ಕನಸಿನಲಿ್ಲ ಅನನ ಕಂಡರೆ ಸತು ಸ್ತದಿದ ಬರುತ್ರು .

ಬಾಾ ಹಮ ಣ್ರಿಗೆ ಹಸ್ತದ್ಯನ ಕೊಟ್ಟ ರೆ ಒಳೆಳ ಯದ್ಯಗುತ್ರು .

ಒಡೆದ ಕನನ ಡಿ ಮನೆಯಲಿ್ಲಡಬಾರದು.

Page 16: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 16

Volume- 2 Issue-2 May-August : 2019

ISSN: 2581-8511

ಸಂಜೆ ವೇಳೆಯಲಿ್ಲ ಮುತ್ರು ೈದೆಯರ ಕೈಬಳೆ ಒಡೆಯಬಾರದು.

ಸತು ಶ್ವ ಹತು ವಾ ಕಿು ಸನ ನ ಮಾಡಲೇಬೇಕು.

ಅಮವಾಸ್ಥಾ ದಿನ ಮಗು ಜನಿಸಿದರೆ ಶಾೊಂತಿ ಮಾಡುವುದು.

ಮುಟ್ಟಟ ದ ಹೆಣಿ್ಣ ಮಕಕ ಳು ಏಕಾೊಂತದಲಿ್ಲರಬೇಕು.

ಕಾಲ್ಲ ತೊಳೆಯುವಾಗ ನಿೋರಿನಿೊಂದ ಇಮಮ ಡಿ ನೆನೆಯಬೇಕು.

ಬಡಗಣ್ ದಿಕಿಕ ಗೆ ತಲೆ ಹಾಕಿ ಮಲಗಬಾರದು.

ಕಾಗೆ ತಗುಲ್ಲದರೆ ಸನ ನ ಮಾಡಿ ಪೂಜೆ ಮಾಡಬೇಕು.

ತೊನ್ನನ ಅತಿು ರುವ ವಾ ಕಿು ಸತು ರೆ ಸ್ತಡಬೇಕು.

ಪ್ರರ ದೇಶ್ಕ ಗ್ರದ್ರಗಳು

ಗಂಗಳ್ ಹೋದುದಕೆಕ ಚೆೊಂಬು ಕೊಟ್ಟಟ ಕಣಿ ಕಳದಂಗೆ

ಮನಸಿಸ ದಂತ್ರ ಮಾದೇವ

ಕಳ್ಳ ನ ಮನಸ್ತಸ ಉಳುಳ ಳ್ಳ ಗೆ

ದಿನ ಸಯುವವರಿಗೆ ಅಳುವವರು ಯಾರು

ಕುಣಿಲಾರದವಳಗೆ ನೆಲಡೊಂಕು

ಕುೊಂಟ್ನಿಗೆ ಒೊಂದು ಚೇಷಿ್ ಕುರುಡನಿಗೆ ನಾನಾ ಚೇಷಿ್

ಅಯಾ ೋ ಎೊಂದರೆ ಆರು ತಿೊಂಗಳು ರೊೋಗ

ಊರು ಇದದ ತಾವ ಹಲಗೇರಿ

ಅತ್ರು ಗೊಂದು ಕಾಲ ಸಸ್ಥಗೊಂದು ಕಾಲ

ಹಾಸಿಗೆಯದದ ಷ್ಟಟ ಕಾಲ್ಲ ಚ್ಚಚ್ಚ

ಭರಣಿ ಮಳೆ ಆದೆಾ ಧರಣಿಲಿ ಫಲ

ಕಿವಿಕಿತು ರೂ ಕಿರಿಮಗ ಪಿಾ ೋತಿ

ಎರಡು ಕಣ್ ಕಾದು ದ್ಯಸಯಾ ಕೆಟ್ಟ

ಮನೆಗೆ ಮಾರಿ ಪ್ರರಿಗೆ ಉಪ್ಕಾರಿ

ಓತಿಕಾಾ ತನಿಗೆ ಬೇಲ್ಲ ಸಕಿಷ

ಅಡಕೆಗೆ ಹೋದ ಮಾನ ಆನೆ ಕೊಟ್ಟ ರು ಬಾರದು

ಉಪ್ಸಂಹಾರ

ಪ್ರರಂಪ್ರಿಕ ಸಂಸಕ ೃತಿ ಮತ್ತು ಐತಿಹಾಸಿಕತ್ರಗೆ ಹೆಸರಾಗರುವ ಗುಬಿ್ಬ ತಾಲೂಕಿನಲಿ್ಲ ಅಮಮ ನಘಟ್ಟ ವೂ

ಒೊಂದ್ಯಗದೆ. ಸಮನವ ಯತ್ರ ಮತ್ತು ಸೊಂಸಕ ೃತಿಕ ಹಿನೆನ ಲೆಯನ್ನನ ಹೊಂದಿರುವ ಈ ಗ್ರಾ ಮದಲಿ್ಲ ಪ್ರಾ ಗೈತಿಹಾಸಿಕ

ಆಯುಧಗಳು ದೇವಾಲಯಗಳು, ವಿೋರಗಲಿ್ಲ ಗಳು, ಮಹಾಸತಿ ಕಲಿ್ಲ ಗಳು, ಲ್ಲೊಂಗು ಮುದೆಾ ಕಲಿ್ಲ ಗಳು,

ಕರವುಗಲಿ್ಲ ಗಳು, ಇೊಂದಿಗೂ ಮೂಲಸಕಿಷ ಗಳಾಗ ಪ್ರಂಪ್ರೆಯನ್ನನ ಪ್ಾ ತಿ ಬ್ಬೊಂಬ್ಬಸ್ತತಿು ವೆ. ಈ ಪ್ಾ ಬಂಧವು

ಸಂಪೂಣ್ಿವಾಗ ಅಮಮ ನಘಟ್ಟ ದ ಸೊಂಸಕ ೃತಿಕ ಪ್ರಂಪ್ರೆಯನ್ನನ ಕುರಿತ ಅಧಾ ಯನವಾಗದೆ. ಇೊಂತಹ ಒೊಂದು

ಸಣಿ್ ಪ್ಾ ಯತನ ದಿೊಂದ ಅಮಮ ನಘಟ್ಟ ದ ಪ್ರಿಚಯ, ಭೌಗೋಳಕತ್ರ, ವಾಯುಗುಣ್, ಅರಣ್ಾ ಸಂಪ್ತ್ತು , ಜಲಸಂಪ್ತ್ತು ,

ಭೂಮೇಲೆಮ ೈ ಸವ ರೂಪ್, ಪ್ರಾ ಗತಿಹಾಸ ಆಯುಧಗಳು, ಚ್ಚರಿತಿಾ ಕ ಹಿನೆನ ಲೆ, ದೇವಾಲಯಗಳು, ವಿೋರಗಲಿ್ಲ ಗಳು,

ಮಹಾಸತಿಕಲಿ್ಲ , ಲ್ಲೊಂಗುಮುದೆಾ ಕಲಿ್ಲ , ಸಮಾಜಿಕ ಆಯಾಮಗಳು, ಜಾನಪ್ದ ವೈಶಿಷ್ಟ ಾ ತ್ರ ಕುರಿತ್ತ ಅಧಾ ಯನ

ಮಾಡಲಾಗದೆ. ಇಲಿ್ಲ ಗಮನಿಸಲಾದ ಮಹತವ ದ ಅೊಂಶ್ವೆೊಂದರೆ ನಿರ್ಧಗಳ್ಳ ರು ಒೊಂದು ವಿೋರಗಲಿನ್ನನ ಅಗೆದು

Page 17: ISSN: 2581-8511 Volume- 2 Tumbe Group of International … · 2019. 10. 18. · IssueTumbe Group of International Journals A Multidisciplinary Journal for more details visit Page

Tumbe Group of International Journals

for more details visit www.tumbe.org Page | 17

Volume- 2 Issue-2 May-August : 2019

ISSN: 2581-8511

ಬ್ಬೋಳಸಿದದ ರು. ಅದನ್ನನ ಮತ್ರು ನಿಲಿ್ಲಸಿ ಮೂಲ ಸವ ರೂಪ್ಕೆಕ ದಕೆಕಯಾಗದಂತ್ರ ಸಂರಕಿಷ ಸಲಾಗದೆ. ಹಿೋಗೆ ನಮಮ

ಪ್ರರಂಪ್ರಿಕ ಸಂಸಕ ೃತಿಯನ್ನನ ಉಳಸಿ ಬಳೆಸ್ತವುದು ನಮೆಮ ಲಿರ ಜವಾಬಾದ ರಿ ಮತ್ತು ಹಣೆಗ್ರರಿಕೆಯಾಗದೆ.

ಆಧಾರ ಗರ ಾಂಥಗಳು

1. ತಿಪ್ಪ ೋರುದಾ ಸವ ರ್ಮ ಹೆಚ್., ``ಕನಾಿಟ್ಕ ಸಂಸಕ ೃತಿ ಸರ್ಮೋಕೆಷ '', ಡಿ.ವಿ.ಕೆ ಪ್ಾ ಕಾಶ್ನ, ಮೈಸೂರು, 2007

2. ಚದ್ಯನಂದ ಮೂತಿಿ ಎೊಂ., ``ಕನನ ಡ ಶಾಸನಗಳ್ ಸೊಂಸಕ ೃತಿಕ ಅಧಾ ಯನ'', ಸಪ್ನ ಬುಕ್ಹೌಸ್,

ಬೊಂಗಳೂರು, 1966

3. ಅಪ್ಣ್ಿ ಕೂ.ಸ., ``ದೇವಾಲಯ ವಾಸ್ತು ಶಿಲಪ ಪ್ರಿಚಯ'', ಪ್ಾ ಸರಾೊಂಗ, ಕನನ ಡ ವಿಶ್ವ ವಿದ್ಯಾ ಲಯ, ಹಂಪಿ,

1999

4. ``ತಿಳಯೋಣ್ ನಮೂಮ ರ ಇತಿಹಾಸ'', ಸವಿಜನಿಕ ಶಿಕ್ಷಣ್ ಇಲಾಖೆ, ಗುಬಿ್ಬ

5. ಬಟ್ಗೇರಿ ಕೃಷ್ಿ ಶ್ಮಿ., ``ಕನಾಿಟ್ಕ ಜನಜಿೋವನ'', ಸಮಾಜ ಪುಸು ಕಾಲಯ, ಧಾರವಾಡ, 1971

6. ಮಹಾದೇವಯಾ ಟ್ಟ.ಆರ್., ``ಗುಬಿ್ಬ ತಾಲಿೂಕು ದಶ್ಿನ'', ಐ.ಬ್ಬ.ಹೆಚ್ ಪ್ಾ ಕಾಶ್ನ, ಬೊಂಗಳೂರು, 1984

7. ಲಕ್ಷಮ ಣ್ ತ್ರಲಗ್ರವಿ (ಸಂ)., ``ಸಥ ಳೋಯ ಚರಿತ್ರಾ ಅಧಾ ಯನದ ತಾತಿವ ಕತ್ರ ಮತ್ತು ಸವ ರೂಪ್'', ಪ್ಾ ಸರಾೊಂಗ,

ಕನನ ಡ ವಿಶ್ವ ವಿದ್ಯಾ ಲಯ, ಹಂಪಿ, 2003

8. ಶೇಷ್ಶಾಸಿು ರ ಆರ್., ಕನಾಿಟ್ಕದ ವಿೋರಗಲಿ್ಲ ಗಳು, ಕನನ ಡ ಸಹಿತಾ ಪ್ರಿಷ್ತ್ತು , ಬೊಂಗಳೂರು, 2004

9. ಸಿದದ ಲ್ಲೊಂಗಪ್ಪ ಕೆ.ಎಸ್.(ಸಂ)., ``ಚೆನನ ಡಿ'' ಜಿಲಿಾ ಕನನ ಡ ಸಹಿತಾ ಪ್ರಿಷ್ತ್ತು , ತ್ತಮಕೂರು, 1994

10. ಶಿವತಾರಕ್, ಕೆ.ಬ್ಬ., ``ಕನಾಿಟ್ಕದ ಪುರಾತತವ ನೆಲೆಗಳು'', ಪ್ಾ ಸರಾೊಂಗ, ಕನನ ಡ ವಿಶ್ವ ವಿದ್ಯಾ ಲಯ, ಹಂಪಿ,

2001

11. ಸೋಮಶೇಖ್ರ್ ಎಸ್.ವೈ., ``ಜಟ್ಟೊಂಗ ರಾಮೇಶ್ವ ರ ಸೊಂಸಕ ೃತಿಕ ದಶ್ಿನ'', ಪ್ಾ ಸರಾೊಂಗ, ಕನನ ಡ

ವಿಶ್ವ ವಿದ್ಯಾ ಲಯ, ಹಂಪಿ, 2004

12. ಶಿಾ ೋನಿವಾಸ ಎ.ಜಿ., ``ನವಶಿಲಾಯುಗದ ಶಿಲಾಕೊಡಲ್ಲ ಪ್ತ್ರು '', ಪ್ಾ ಜಾವಾಣಿ ದಿನಪ್ತಿಾ ಕೆ, ಅಕೊಟ ೋಬರ್

24.2018